K2kannadanews.in
Health Tip’s ಆರೋಗ್ಯ ಭಾಗ್ಯ : ನಮ್ಮ ಮನೆಯಲ್ಲಿ ಸಿಗುವ ವಸ್ತುಗಳು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳು ತಮ್ಮ ಪ್ರಯೋಜನಗಳು ಸಿಗುವುದು ಅನೇಕರಿಗೆ ತಿಳಿದಿಲ್ಲ. ಮುಖ್ಯವಾಗಿ ಚಳಿಗಾಲದಲ್ಲಿ ಕಾಣಿಸುವ ಕೆಮ್ಮ ಮತ್ತು ಜೀರ್ಣಕ್ರಿಯೆಗೆ ರಾಮಬಾಣದಂತೆ ಕೆಲಸ ಮಾಡುತ್ತವೆ.
ಬೆಲ್ಲ ಮತ್ತು ಓಮ ಕಾಳನ್ನು ಒಟ್ಟಿಗೆ ನಿಯಮಿತವಾಗಿ ಸೇವಿಸುವುದರಿಂದ ಆಗುವ ಪ್ರಯೋಜನೆಗಳು…
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ, ಮಲಬದ್ಧತೆಯ ಸಮಸ್ಯೆ ಸುಧಾರಿಸಬೇಕಾದರೆ ಬೆಲ್ಲ ಮತ್ತು ಓಮ ಕಾಳನ್ನು ಸೇವಿಸಬಹುದು.
* ಶೀತ ಮತ್ತು ಕೆಮ್ಮಿಗೆ ಉಪಶಮನ :
ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಹೋಗಲಾಡಿಸಲು ಬೆಲ್ಲ ಮತ್ತು ಓಮಕಾಳನ್ನು ಸೇವಿಸಬೇಕು.ಇದು ನಿಮಗೆ ಗಂಟಲು ನೋವು, ಕೆಮ್ಮು, ನೆಗಡಿಯಿಂದ ತ್ವರಿತ ಪರಿಣಾಮ ಬೀರುತ್ತದೆ.
* ಬೆನ್ನು ನೋವಿನಿಂದ ಪರಿಹಾರ : ಬೆಲ್ಲ ಮತ್ತು ಓಮಕಾಳು ಬೆನ್ನುನೋವಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಮಲಗುವ ಮುನ್ನ ಅರ್ಧ ಟೀಚಮಚ ಓಮಕಾಳು ಮತ್ತು ಬೆಲ್ಲವನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಸೇವಿಸಬೇಕು. ಹೀಗೆ ಮಾಡುತ್ತಾ ಬಂದರೆ ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ.
* ಪಿರಿಯಡ್ಸ್ ನೋವು : ಪಿರಿಯಡ್ಸ್ ಸಮಯದಲ್ಲಿನ ಕಾಡುವ ನೋವಿಗೆ ಬೆಲ್ಲ ಮತ್ತು ಓಮಕಾಳು ಪರಿಹಾರ ನೀಡುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಹರಿವನ್ನು ಸುಧಾರಿಸಬಹುದು. ಇದು ಪಿರಿಯಡ್ಸ್‌ನಲ್ಲಿ ಕಾಣಿಸುವ ನೋವು ಮತ್ತು ಸೆಳೆತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
* ಅಸ್ತಮಾದಿಂದ ಪರಿಹಾರ :
ಬೆಲ್ಲ ಮತ್ತು ಓಮಕಾಳು ಅಸ್ತಮಾದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಪ್ರಯೋಜನಕಾರಿ ಎನ್ನಲಾಗಿದೆ. ಬೆಲ್ಲ ಮತ್ತು ಓಮಕಾಳು ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.ದಿನಕ್ಕೆ 4 ರಿಂದ 5 ಗ್ರಾಂ ಓಮಕಾಳನ್ನು ತಿನ್ನಬಹುದು.ಇದರಿಂದ ಸಾಕಷ್ಟು ಅನುಕೂಲವಾಗಲಿದೆ.