K2kannadanews.in
Crime News ಮಸ್ಕಿ : ಅನೈತಿಕ ಸಂಬಂಧ ಆರೋಪದ ಮೇಲೆ ಏಳು ಜನರ ಗುಂಪೊಂದು ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಸಮೀಪದ ಸೊಸೈಟಿ ಕ್ಯಾಂಪಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸೊಸೈಟಿ ಕ್ಯಾಂಪಿನಲ್ಲಿ ಘಟನೆ ಜರುಗಿದೆ. ರಾಜಪ್ಪ (41) ಮೃತ ವ್ಯಕ್ತಿ. ಮೃತ ರಾಜಪ್ಪ ಎಂದಿನಂತೆ ಜಮೀನನ ಕೆಲಸಕ್ಕೆ ತೆರಳುವಾಗ ಆರೋಪಿ ಹುಚ್ಚಪ್ಪನ ಹೆಂಡತಿಯೊಂದಿಗೆ ಸಲುಗೆಯಿಂದ ಮಾತನಾಡಿದ ಕಾರಣವನ್ನು ನೇಪವಾಗಿ ಮಾಡಿಕೊಂಡ ಹುಚ್ಚಪ್ಪನ ಕುಟುಂಬದವರು, ಕಟ್ಟಿಗೆ ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ರಾಜಪ್ಪನನ್ನು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಹೆಂಡತಿ ಮೋನಮ್ಮನ ದೂರಿನ ಆಧಾರದ ಮೇಲೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದಾರೆ. ಮೂರು ಜನರ ಆರೋಪಿಗಳ ಪತ್ತೆಗೆ ಕವಿತಾಳ ಠಾಣೆಯ ಪೊಲೀಸರು ಬಲೆ ಬಿಸಿದ್ದಾರೆ.