K2kannadanews.in
Snake in A/C ವೈರಲ್ ಸುದ್ದಿ : ನೀವು ಮನೆಗೆ (Home) ಎಸಿ(AC) ಹಾಕಿಸಿದ್ದೀರಾ..! ಹಾಗಾದ್ರೆ ಹುಷಾರ್ ಒಮ್ಮೆ ಅದನ್ನ ಚೆಕ್ (Check) ಮಾಡಿಸಿ. ಬೇಸಿಗೆಯಿಂದ (Summer) ತಂಪಾಗಲು ಮನೆಗೆ ಎಸಿಯನ್ನ ಹಾಕಿಸಿದ್ದು, ಆದರೆ ಅದೇ ಏಸಿಯನ್ನು ಹಾವುಗಳು (Snakes) ಮನೆ ಮಾಡಿಕೊಂಡ ವಿಚಿತ್ರ ಘಟನೆಯೊಂದು ಸಾಮಾಜಿಕ (Social media) ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಿತ್ರವಾದ ವಿಡಿಯೋಗಳು ವೈರಲ್ (Viral) ಆಗುತ್ತವೆ. ಅಂತದ್ದೇ ಒಂದು ವಿಡಿಯೋ (Video) ವೈರಲ್ ಆಗಿದ್ದು. ವೈರಲ್ ಆಗಿರುವ ವಿಡಿಯೋದಲ್ಲಿ, ಬೇಸಿಗೆಯೊಂದ ಮನೇಲಿ ತಂಪಾಗಿರಲು ಎಸಿ ಹಾಕಿಸಲಾಗಿದೆ. ಆ ಒಂದು ಎಸಿ ಒಳಗಡೆಯಿಂದ ಓರ್ವ ವ್ಯಕ್ತಿ ಹಾವಿನ ಮರಿಗಳನ್ನು ತೆಗೆದು, ನೋಡಿ ಎಸಿ ಹೋಳಿಗೆ ಹಾವಿನ ಮರಿಗಳು ಮನೆ ಮಾಡಿಕೊಂಡಿವೆ ಎಂದು ಹೇಳುತ್ತಾನೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾಷೆಯ ಪ್ರಕಾರ ಆಂಧ್ರ ಅಥವಾ ತೆಲಂಗಾಣದಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ. ಆದ್ರೆ ಇಲ್ಲಿ ಇದು ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡಲಾಗಿದೆ ಎಂಬ ಸಾಕಷ್ಟು ಕಮೆಂಟ್ಗಳು ಬಂದಿವೆ.