ನಟ ದರ್ಶನ್ ಗೆ ಮರಣದಂಡನೆ ವಿಧಿಸುವಂತೆ ಅ.ಭಾ.ವೀ.ಲಿಂ ಮಹಾಸಭಾ ಒತ್ತಾಯ..

K 2 Kannada News
ನಟ ದರ್ಶನ್ ಗೆ ಮರಣದಂಡನೆ ವಿಧಿಸುವಂತೆ ಅ.ಭಾ.ವೀ.ಲಿಂ ಮಹಾಸಭಾ ಒತ್ತಾಯ..
WhatsApp Group Join Now
Telegram Group Join Now

K2kannadanews.in

death penalty to darshan : ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಅವರನ್ನು ಬರ್ಬರವಾಗಿ ಹತ್ಯೆ (murder) ಮಾಡಿರುವ ಚಿತ್ರನಟ ದರ್ಶನ್ (Actor Darshan) ಮತ್ತು ಗ್ಯಾಂಗ್ ಗೆ (Gang) ಮರಣದಂಡನೆ ವಿಧಿಸುವಂತೆ (imposing the death penalty) ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಒತ್ತಾಯಿಸುತ್ತಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಯಚೂರು ಜಿಲ್ಲಾ ಘಟಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದ ನಟ ದರ್ಶನ್ ಮತ್ತು ಸಹಚರರ ವರ್ತನೆ ಖಂಡನಾರ್ಹವಾಗಿದೆ. ಪಾತಕಿಗಳು ಗೈದ ಕ್ರೂರಕೃತ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಹಾಗಾಗಿ ಕೊಲೆಗೈದವರಿಗೆ ಮರಣ ದಂಡನೆಯಂತಹ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದು, ಇಂತಹ ಕ್ರೂರ ಕೃತ್ಯಗಳು ಮರಕಳಿಸದಂತೆ ಆಗಬೇಕು. ನೊಂದ ಕುಟುಂಬಕ್ಕೆ ಪರಮಾತ್ಮ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

WhatsApp Group Join Now
Telegram Group Join Now
Share This Article