This is the title of the web page
This is the title of the web page
Politics News

AAP ಗೆದ್ದರೆ ರಾಜ್ಯದಲ್ಲಿ 3 ಕೃಷಿ ಕಾಯ್ದೆ ರದ್ದು


ರಾಯಚೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷವು ರೈತರು ವಿರೋಧಿಸುತ್ತಿರುವ 3 ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಸೇರಿದಂತೆ ಹಲವು ಭರವಸೆಗಳನ್ನು ಕೇಜ್ರಿವಾಲ್‌ ಗ್ಯಾರಂಟಿ ಹೆಸರಲ್ಲಿ ನೀಡಿದೆ ಎಂದು ಆಮ್ ಆದ್ಮಿ ಪಾರ್ಟಿ ನಗರ ಕ್ಷೇತ್ರದ ಅಭ್ಯರ್ಥಿ ವೀರೇಶಕುಮಾರ ಹೇಳಿದರು.

ಬಿಜೆಪಿ ಪಕ್ಷ 40 ಪರಸೆಂಟ್ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಈ ಬಾರಿ ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದ ಅವರು,ರೈತರ ಬೆಳೆ ಮಾರಿದ ದಿನವೇ ಹಣ ಪಾವತಿ ಗ್ಯಾರಂಟಿ,ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಇಳಿಸಿ ಮನೆ ತಲುಪುವಸ್ಟರಲ್ಲಿ ಹಣ ಪಾವತಿಸಲಾಗುವುದು. ವರ್ಷಕ್ಕೆ 200 ಸಾವಿರ ಉದ್ಯೋಗ,ಉದ್ಯೋಗ ಸಿಗುವವರೆಗೆ ತಿಂಗಳಿಗೆ ರೂ 3 ಸಾವಿರ ನಿರುದ್ಯೋಗ ಭತ್ಯೆ ನೀಡಲಿದ್ದಾರೆ. 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ತಿಂಗಳಿಗೆ ರೂ 5 ಸಾವಿರ ಸ್ಟೈಫಂಡ್ ನೊಂದಿಗೆ 6 ತಿಂಗಳ ಉದ್ಯೋಗ ತರಬೇತಿ ನೀಡಲಿದ್ದಾರೆ ಎಂದರು.
ಸ್ಥಳೀಯ ಚುನಾವಣೆಗಳಿಗೆ ಮತದಾನದ ವಯಸ್ಸು 16 ವರ್ಷಕ್ಕೆ ಇಳಿಸಲಾಗುವುದು,ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸಲಾಗುತ್ತದೆ ಎಂದರು.


[ays_poll id=3]