This is the title of the web page
This is the title of the web page
Politics News

ಸುಭಾಷ್ ಚಂದ್ರ ಸಂಭಾಜಿ ಅವರಿಂದ ಭರ್ಜರಿ ಪ್ರಚಾರ ಕಾರ್ಯ


ರಾಯಚೂರು : ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಭಾಷ್ ಚಂದ್ರ ಸಂಭಾಜಿಯವರು ಭರ್ಜರಿ ಮತ ಪ್ರಚಾರ ಮಾಡಿ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ಕೊಡುವಂತೆ ಮತಯಾಚನೆ ಮಾಡಿದರು.

ರಾಯಚೂರು ತಾಲೂಕಿನ ಮುರಾನಪುರ, ಹಾಳ ವೆಂಕಟಪುರ, ಅರಳಪ್ಪನಹುಡ ಸುಲ್ತಾನಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಈ ವೇಳೆ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಗ್ರಾಮಗಳಿಗೆ ತೆರಳಿದಾಗ AAP ಅಭ್ಯರ್ಥಿ ಸುಭಾಷ್ ಚಂದ್ರ ಸಂಭಾಜಿ ಅವರಿಗೆ ಗ್ರಾಮಸ್ಥರು ಉತ್ತಮವಾಗಿ ಸ್ಪಂದನೆ ಮಾಡಿದ್ದು, ಒಂದು ವೇಳೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಎನ್ನುವುದನ್ನು ನಿಲ್ಲಿಸಲಾಗುವುದು, ರಾಜ್ಯದ ಅಭಿವೃದ್ಧಿ ಜೊತೆಗೆ ಶಿಕ್ಷಣ ಮತ್ತು ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಲಾಗುವುದು ಎಂಬ ನಿಟ್ಟಿನಲ್ಲಿ ಮತ ಪ್ರಚಾರ ಮಾಡಿದರು.


[ays_poll id=3]