This is the title of the web page
This is the title of the web page
Politics News

75 ವರ್ಷ ಆಳ್ವಿಕೆ ಮಾಡಿದ ಪಕ್ಷಗಳು ಅಭಿವೃದ್ಧಿ ಮಾಡುವಲ್ಲಿ ವಿಫಲ


ರಾಯಚೂರು : 75 ವರ್ಷ ಆಳ್ವಿಕೆ ಮಾಡಿದ ಪಕ್ಷಗಳು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆಮ್ ಆದ್ಮಿ ಪಕ್ಷದ ರಾಯಚೂರು ಗ್ರಾಮಾಂತರ ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಭಾಜಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

2023ರ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಡಾ.ಸುಭಾಷ್ ಚಂದ್ರ ಸಂಭಾಜಿ ಅವರು ರಾಯಚೂರು ಗ್ರಾಮಾಂತರ ಭಾಗದಲ್ಲಿ ಬಿರುಸಿನ ಪ್ರಚಾರ ಕಾರ್ಯ ಮಾಡುತ್ತಿದ್ದು, ಇಂದು ರಾಯಚೂರು ತಾಲೂಕಿನ ಸೀಕಲ್, ಕೊರವಿ, ಸಾದಾಪೂರು, ಉಮಳಿ ಪನ್ನೂರು, ಹರಸಹಳ್ಳಿ, ಶಾಸ್ತ್ರಿ ಕ್ಯಾಂಪ್, ಗೋರ್ಕಲ್ಲ್, ಮಟಮಾರಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಈ ವೇಳೆ ಮಟಮಾರಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯವನ್ನು 75 ವರ್ಷಗಳ ಕಾಲ ಆಳಿರುವಂತಹ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ. ಅಲ್ಲದೆ ರಾಯಚೂರು ಜಿಲ್ಲೆ, ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಬರುವಂತಹ ಗ್ರಾಮಗಳನ್ನು ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಯಚೂರು ಗ್ರಾಮಾಂತರ ಭಾಗದಲ್ಲಿ ಅನಕ್ಷರತೆ ತಾಂಡವವಾಡುತ್ತಿದೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುತ್ತಿಲ್ಲ, ಕುಡಿಯಲು ನೀರಿಲ್ಲ, ಉತ್ತಮವಾದ ರಸ್ತೆಗಳಿಲ್ಲ, ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಯಾವುದೇ ರೀತಿಯಾದ ಒಂದು ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಎರಡು ನದಿಗಳಿದ್ದರೂ ಕೂಡ ಇಲ್ಲಿನ ರೈತರಿಗೆ ಸರಿಯಾದ ನೀರಾವರಿ ಸೌಲಭ್ಯಗಳು ಸಿಕ್ಕಿಲ್ಲ. ಮುಖ್ಯವಾಗಿ ಕ್ಷೇತ್ರದಾತ್ಯಂತ ಭ್ರಷ್ಟಾಚಾರ ತಾಂಡವಡುತ್ತಿದೆ. ಈ ಒಂದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಆಮ್ ಆದ್ಮಿ ಪಕ್ಷ ಪಣತೊಟ್ಟಿದೆ. ನಿರ್ಮೂಲನೆ ವಿರುದ್ಧ ಹೋರಾಡಲು ನಾನು ಟಿಕೆಟ್ ಪಡೆದು ಬಂದಿದ್ದೇನೆ, ಒಂದು ಅವಕಾಶ ನೀಡಿ ಎಂಬ ನಿಟ್ಟಿನಲ್ಲಿ ಮತ ಪ್ರಚಾರ ಮಾಡಿದರು.


[ays_poll id=3]