K2kannadanews.in
Passion Food ಕಲ್ಲೂರು : ವಿಷ ಆಹಾರ ಸೇವಿಸಿ ಒಂದೇ ಕುಟುಂಬದ (Family) ನಾಲ್ವರು ಸಾವನ್ನಪ್ಪಿದ (death) ಘಟನೆಗೆ ಸಂಬಂದಿಸಿದಂತೆ ರಿಮ್ಸ್ ಆಸ್ಪತ್ರೆಯಲ್ಲಿ (Rims Hospital) ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮಲ್ಲಮ್ಮ (24) ಬುಧವಾರ ಮೃತಪಟ್ಟಿದ್ದಾರೆ.
ರಾಯಚೂರು (Raichur) ಜಿಲ್ಲೆ ಸಿರವಾರ (Sirawar) ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಆಗಸ್ಟ್ 1ರಂದು ವಿಷ ಆಹಾರ (passion food) ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಯುವತಿ ಮಲ್ಲಮ್ಮ(24) ತೀವ್ರ ಅಸ್ವಸ್ಥಗೊಂಡು ಕಳೆದ ಒಂದು ವಾರದಿಂದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.