K2kannadanews.in
Electric shook ಸಿರವಾರ : 50 ಮೆಗಾವ್ಯಾಟ ಸೋಲಾರ್ ಪವರ್ ಪ್ಲಾಂಟ್ ನಲ್ಲಿ ವಿದ್ಯುತ್ ಕೇಬಲ್ ಸ್ಪರ್ಶಿಸಿ ಯುವಕ ಮೃತಪಟ್ಟ ಘಟನೆ ಇತ್ತೀಚೆಗೆ ಮಾಚನೂರು ಗ್ರಾಮದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಚನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಒಂದು ಘಟನೆ ಜರುಗಿದೆ. ಮೃತ ಯುವಕ ತಾಲೂಕಿನ ಅತ್ತನೂರು ಗ್ರಾಮದ ಅಜ್ಮೀರ್(೧೯ ) ಎಂದು ತಿಳಿದುಬಂದಿದೆ. ಮಾಚನೂರು ಗ್ರಾಮದ ಹೊರವಲಯದಲ್ಲಿನ ೫೦ ಮೆಗಾ ವ್ಯಾಟ್ ಸೋಲಾರ್ ಪವರ್ಪ್ಲಾಂಟ್ನಲ್ಲಿ ವಾರದ ಹಿಂದೆ ಕೆಲಸಕ್ಕೆ ಸೇರಿದ್ದ ಅಜ್ಮೀರ್, ಎಂದಿನಂತೆ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ಜರುಗಿದೆ.
ಪವರ್ ಪ್ಲಾಂಟ್ ನಲ್ಲಿ ಕೆಲಸಕ್ಕೆ ಹೋಗಿದ್ದ ಯುವಕನಿಗೆ ಯಾವುದೇ ಸೇಪ್ಟಿ ಉಪಕರಣಗಳು ನೀಡಿರಲಿಲ್ಲ. ಹಾಗಾಗಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಜರುಗಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಘಟನೆ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.