ಜೀವಂತ ಹಾವು ತಿಂದ ಮಹಿಳೆ: ಇಂಥವರಿಂದಾಗಿ ಹೊಸ ವೈರಸ್‌ಗಳು ಬರುತ್ತವೆಂದ ನೆಟ್ಟಿಗರು..

K 2 Kannada News
ಜೀವಂತ ಹಾವು ತಿಂದ ಮಹಿಳೆ: ಇಂಥವರಿಂದಾಗಿ ಹೊಸ ವೈರಸ್‌ಗಳು ಬರುತ್ತವೆಂದ ನೆಟ್ಟಿಗರು..
WhatsApp Group Join Now
Telegram Group Join Now

K2kannadanews.in

Viral video : ಹಾವು (snake) ಎಂದರೆ ಯಾರಿಗೆ ತಾನೇ ಭಯ (Fear) ಇಲ್ಲ ಹೇಳಿ. ಹೌದು ನಾವು ನೀವೆಲ್ಲ ಹಾವುಗಳೆಂದರೆ ಕ್ಷಣಮಾತ್ರದಲ್ಲಿ ಮಾರುತ ದೂರ ಓಡಿಹೋಗುತ್ತವೆ. ಚೀನಾ (China) ಸೇರಿದಂತೆ ಕೆಲ ದೇಶಗಳಲ್ಲಿ (Country’s) ಹಾವು ಕೂಡ ಆಹಾರ (Food) ಪದ್ಧತಿಗಳಲ್ಲಿ ಒಂದು. ಆದರೆ ಇದೀಗ ವಿಡಿಯೋ (Video) ಒಂದು ವೈರಲ್ (viral) ಆಗಿದ್ದು, ಆ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯದ ಜೊತೆಗೆ ಹಿಡಿ ಶಾಪವನ್ನು ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು (Women) ಜೀವಂತ ಹಾವನ್ನು (alive snake) ಯಾವುದೇ ಭಯವಿಲ್ಲದೇ ಆರಾಮಾಗಿ ತಿನ್ನುತ್ತಿದ್ದಾಳೆ. ವೈರಲ್ ಕ್ಲಿಪ್‌ನಲ್ಲಿ ಯುವತಿ ಹಸಿ ಹಾವನ್ನು ಜಗಿಯುತ್ತಿರುವುದನ್ನು ಕಾಣಬಹುದು. ಹುಡುಗಿಯ ಮುಂದೆ ಹಾವುಗಳನ್ನು ಇಡಲಾಗಿದ್ದು ಅದರಲ್ಲಿ ಹಸಿರು ತರಕಾರಿಗಳೂ ಇವೆ. ಆಕೆ ಹಾವುಗಳಲ್ಲಿ ಒಂದನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅದನ್ನು ಹಸಿಯಾಗಿ ತಿನ್ನಲು ಪ್ರಾರಂಭಿಸುತ್ತಾಳೆ. ಅವಳು ಹಾವಿನ ಮಾಂಸವನ್ನು ತುಂಬಾ ಆರಾಮವಾಗಿ ತಿನ್ನುತ್ತಿದ್ದಾಳೆ.

ದಕ್ಷಿಣ ಕೊರಿಯಾದಲ್ಲಿ (south koriya) ವಿಚಿತ್ರ ಆಹಾರಗಳನ್ನು ಸೇವಿಸುವ ಮುಕ್ಬಾಂಗ್ (Mukbang) ಎಂಬ ಟಿವಿ ಕಾರ್ಯಕ್ರಮವಿದೆ (TV program). ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು ಈ ವೀಡಿಯೊ ಬಹುಶಃ ಇದೇ ಕಾರ್ಯಕ್ರಮದ್ದಾಗಿರಬೇಕು ಎಂದು ನಂಬಲಾಗಿದೆ.ಈ ವಿಡಿಯೋಪವನ್ ಎಸ್ ಸಾವಂತ ಎಂಬ ಹೆಸರಿನ ಖಾತೆಯಿಂದ ಹಾಕಲಾಗಿದೆ. ವೈರಲ್ ಆಗಿದ್ದು 16 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಹುಡುಗಿ ಹಾವು ತಿಂದಿರುವ ಈ ವಿಡಿಯೋವನ್ನು ಹೆಚ್ಚಿನವರು ಟೀಕಿಸಿದ್ದಾರೆ. ಇಂಥವರಿಂದಾಗಿ ಹೊಸ ಹೊಸ ವೈರಸ್‌ಗಳು ಬರುತ್ತವೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article