ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ, ಅಸಮಧಾನಗೊಂಡ ಪೊಷಕರಿಂದ ಶಿಕ್ಷಕನಿಗೆ ಧರ್ಮದೇಟು..?

K 2 Kannada News
ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ, ಅಸಮಧಾನಗೊಂಡ ಪೊಷಕರಿಂದ ಶಿಕ್ಷಕನಿಗೆ ಧರ್ಮದೇಟು..?
WhatsApp Group Join Now
Telegram Group Join Now

K2kannadanews.in

Teacher bet student ಮುಂಬೈ : ಕ್ಷುಲ್ಲಕ ಕಾರಣಕ್ಕೆ ಶಾಲಾ ಶಿಕ್ಷಕನೊಬ್ಬ 11 ವರ್ಷದ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿ ಕಿವಿ ಶಾಶ್ವತವಾಗಿ ಹಾನಿಗೀಡಾಗುವಂತೆ ಥಳಿಸಿದ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ.

ಹೌದು ಮಹಾರಾಷ್ಟ್ರದ ಪುಣೆಯಲ್ಲಿ ಘಟನೆ ಸೆಪ್ಟೆಂಬರ್‌ 27 ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ತರಗತಿಯೊಳಗೆ ಪ್ರವೇಶಿಸಿದ‌ 6ನೇ ತರಗತಿಯ ವಿದ್ಯಾರ್ಥಿ ಇನ್‌ ಶರ್ಟ್‌ ಮಾಡಿಲ್ಲ ಎಂದು ನಿಂದಿಸಿದ್ದಾನೆ ಶಿಕ್ಷಕ, ವಿದ್ಯಾರ್ಥಿ ಮೌನವಾಗಿದ್ದರಿಂದ ಕೋಪಗೊಂಡ ಶಿಕ್ಷಕ ಅಮಾನುಷವಾಗಿ ಥಳಿಸಲು ಪ್ರಾರಂಭಿಸಿದ್ದಾನೆ. ಇದರಿಂದ ಬಾಲಕನ ಮೂಗು ಮತ್ತು ಕಿವಿಯಿಂದ ರಕ್ತಸ್ರಾವವಾಗಿದೆ. ಶಾಲೆ ಮುಗಿಸಿ ಮನೆಗೆ ಮರಳಿದ ಬಾಲಕ ಪೋಷಕರಿಗೆ ಘಟನೆಯ ಬಗ್ಗೆ ತಿಳಿಸಿದ್ದಾನೆ. ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ ವಿದ್ಯಾರ್ಥಿಯ ಕಿವಿ ಶಾಶ್ವತವಾಗಿ ಹಾನಿಗೀಡಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಘಟನೆಯಿಂದ ಆಕ್ರೋಶಿತರಾದ ಬಾಲಕನ ಪೋಷಕರು ದೂರು ದಾಖಲಿಸಲು ಸ್ವರ್ಗೇಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ದೂರಿನ ನಂತರ ಪೊಲೀಸರು ಶಾಲೆಗೆ ಭೇಟಿ ನೀಡಿ ಘಟನೆಯ ದಿನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ವಿಡಿಯೋದಲ್ಲಿ ಶಿಕ್ಷಕ ಕ್ರೂರವಾಗಿ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ. ಸಿಸಿಟಿವಿ ದೃಶ್ಯವನ್ನು ವೀಕ್ಷಿಸಿದ ಪೋಷಕರು ಕಂಪ್ಯೂಟರ್‌ ಶಿಕ್ಷಕಕ ಸಂದೇಶ್ ಭೋಸಲೆ ಬಳಿ ಹೋಗಿ ಆತನನ್ನು ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article