
K2 ಹೆಲ್ತ್ ಟಿಪ್ : ಆಯಾ ಕಾಲಕ್ಕೆ ಸಿಗುವ ಹಣ್ಣು ತರಕಾರಿಗಳು ದೇಹವನ್ನು ಸೇರಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಿನ ಪೋಷಕಾಂಶಗಳು ಇರುವಂತಹ ಹಣ್ಣು ತರಕಾರಿಗಳನ್ನು ಸೇವಿಸುವುದು ಉತ್ತಮ. ಹಾಗಾಗಿ ಸಿಹಿಗೆಣಸನ್ನು ನಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳಿಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಸಿಹಿಗೆಣಸಿನಲ್ಲಿರುವ ವಿಟಮಿನ್ ಹಾಗೂ ಖನಿಜಾಂಶಗಳ ನೋಡಿದಾಗ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣದಂಶ,, ಮೆಗ್ನಿಷ್ಯಿಯಂ, ರಂಜಕ, ಪೊಟಾಷ್ಯಿಯಂ, ಸತು, ಥೈಯಾಮಿನ್ ಹೀಗೆ ಉತ್ತಮವಾದ ಪೋಷಕಾಂಶಗಳನ್ನು ಹೊಂದಿರುವಂತಹ ಒಂದು ಸಿಹಿಕಣಸು ಆರೋಗ್ಯಕ್ಕೆ ಒಳ್ಳೆಯದು.
ನಾವು ಸಿಹಿಗೆಣಸು ತಿನ್ನುವುದರಿಂದ ಆಗುವ ದೇಹಕ್ಕೆ ಆಗುವ ಪ್ರಯೋಜನಗಳು ತುಂಬಾ ಪರಿಣಾಮಕಾರಿಯಾಗಿದೆ.
* ಸಿಹಿಗೆಣಸು ತಿನ್ನುವುದರಿಂದ ತ್ವಚೆ ಆರೋಗ್ಯಕ್ಕೆ ಒಳ್ಳೆಯದು.
* ಮಧುಮೇಹಿಗಳಿಗೆ ಸಿಹಿಗೆಣಸು ತುಂಬಾ ಒಳ್ಳೆಯ ಆಹಾರ. ಇದರಲ್ಲಿ ಕಾರ್ಬ್ಸ್ ಮತ್ತು ಅಡಿಪೊನೆಕ್ಟಿನ್ ಹಾರ್ಮೋನ್ ಇರುವುದರಿಂದ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.
* ಇದರಲ್ಲಿ ಬೀಟಾ ಕೆರೋಟಿನ್ ಮತ್ತು ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ
ಹೆಚ್ಚಿಸುತ್ತದೆ. ಇದು ಸೋಂಕು, ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ.
* ಸಿಹಿಗೆಣಸು ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆಯಾಗುವುದು.
* ಸಿಹಿಗೆಣಸು ಬೇಯಿಸಿದಾಗ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿ
ಸಕ್ಕರೆಯಂಶ ತಕ್ಷಣ ಹೆಚ್ಚಾಗುವುದಿಲ್ಲ.
* ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ಹೃದಯ ಆರೋಗ್ಯಕ್ಕೆ ಒಳ್ಳೆಯದು.
* ಇದರಲ್ಲಿ ಬೀಟಾ ಕೆರೋಟಿನ್ ಹಗೂ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ.
* ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ಮೆದುಳು ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಿಹಿಗೆಣಸು ಸಹಕಾರಿ.
* ನೀವು ಆರೋಗ್ಯಕರವಾಗಿ ಮೈ ತೂಕ ಕಡಿಮೆಯಾಗಬೇಕೆಂದು ಬಯಸುವುದಾದರೆ ನೀವು ನಿಮ್ಮ ಡಯಟ್‌ನಲ್ಲಿ ಸಿಹಿಗೆಣಸು ಸೇರಿಸಿ. ಇದನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುತ್ತದೆ, ಮೈ ತೂಕ ಕೂಡ ಹೆಚ್ಚಾಗುವುದಿಲ್ಲ.
![]() |
![]() |
![]() |
![]() |
![]() |
[ays_poll id=3]