ಮುಖ್ಯ ಗುರುಗಳು ಇಲ್ಲದೆ ನಡೆಯುತ್ತಿರುವ ಶಾಲೆ
![]() |
![]() |
![]() |
![]() |
![]() |
ರಾಯಚೂರು : ತಾಲೂಕಿನ ತಡಕಲ್ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಕಳೆದ ಎರಡು ವರ್ಷಗಳಿಂದ ಮುಖ್ಯಗುರುಗಳಿಲ್ಲದೆ ನಡೆಸಿಕೊಂಡು ಬರುತ್ತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆ ಸಂಶಯಾಸ್ಪದವಾಗಿದ್ದು ಸಿ.ಆರ್.ಪಿ. ಬಿಆರ್‌ಸಿ, ಬಿಇಓ, ಡಿಡಿಪಿಐ ಅವರ ವಿರುದ್ದ ಆಯುಕ್ತರ ಮಟ್ಟದಲ್ಲಿ ತನಿಖೆಯಾಗಬೇಕೆಂದು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಜ್ಯೋತಿರ್ಲಿಂಗ ಗೌಡ ತಡಕಲ್ ಒತ್ತಾಯಿಸಿದರು.
24ನೇ ಡಿಸೆಂಬರ್ 2020 ರಿಂದ ಶಾಲೆಗೆ ಮುಖ್ಯಗುರುಗಳಿಲ್ಲದಿರುವುದು ಸ್ಥಗಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳು, ಶಿಕ್ಷಣದ ಗುಟ್ಟಮಟ್ಟ ಹಾಗೂ ಶಾಲಾಅಭಿವೃದ್ಧೀ ಕುಂಠಿತವಾಗಿರುವ ಕುರಿತು ಶಿಕ್ಷಣ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದರು. ಶಾಶ್ವತ ಮುಖ್ಯಗುರುಗಳನ್ನು ಒದಗಿಸಿ ಶಾಲಾ ಅನುದಾನ ಖಾತೆಯನ್ನು ಆಡಿಟ್ ಮಾಡಿ ನಮ್ಮ ಸಾರ್ವಜನಿಕ ದೇಣಿಗೆ ಹಾಗೂ ಸರ್ಕಾರದ ಅನುದಾನವನ್ನು ಶಾಲಾ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲು ಹಲವಾರು ಬಾರಿ ಮನವಿ ಸಲ್ಲಿಸಿದರೂ ಈ ವರೆಗೆ ಸ್ಪಂದಿಸಿಲ್ಲ.
ಶಾಲಾ ಅನುದಾನವಿಲ್ಲದೆ ಹಲವಾರು ಸಹ ಶಿಕ್ಷಕರಿಗೆ ಪ್ರಭಾರಿ ಮುಖ್ಯಗುರುಗಳ ಜವಾಬ್ದಾರಿಯನ್ನು ನೀಡಿರುತ್ತಾರೆ. ಅದನ್ನು ನಿಬಾಯಿಸಲು ಆಗದೆ ಎಲ್ಲ ಸಹಶಿಕ್ಷಕರು ಆ ಹೊಣೆಯನ್ನು ನಿರಾಕರಿಸುತ್ತಾರೆ. ಇದಕ್ಕೆ ಮೇಲಾಧಿಕಾರಿಗಳು ಎಸ್‌ಡಿಎಂಸಿ ಸಹಕಾರ ನೀಡುತ್ತಿಲ್ಲ ಎಂದು ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿರುತ್ತಾರೆ. ಶಾಲಾ ಸುಧಾರಣೆ ಹಾಗೂ ಶಿಕ್ಷಕರ ರಕ್ಷಣೆಗೆ ಎಸ್‌ಡಿಎಂಸಿ ಸದಾ ಸಿದ್ದವಾಗಿದ್ದು ಶಿಕ್ಷಕರ ರಕ್ಷಣೆಗೆ ಉಚ್ಛ ನ್ಯಾಯಲಯದಲ್ಲಿ ಹೋರಾಟ ಮಾಡಿ ಶಿಕ್ಷಕರ ಮರು ನಿಯೋಜನೆ ಆದೇಶ ಅನುಮಾನ ಮಾಡಿಸಿದೆ ಎಂದರು.
![]() |
![]() |
![]() |
![]() |
![]() |