ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾದ ನಿವೃತ್ತ ಐಎಎಸ್‌ ಅಧಿಕಾರಿ..

K 2 Kannada News
ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾದ ನಿವೃತ್ತ ಐಎಎಸ್‌ ಅಧಿಕಾರಿ..
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ನಿವೃತ್ತ ಐಎಎಸ್‌‍ ಅಧಿಕಾರಿ (retired IAS officer) ಜಿ.ಕುಮಾರ್‌ ನಾಯಕ್‌ ತಮ್ಮ ಮೊದಲ ಪ್ರಯತ್ನದಲ್ಲೇ (first attempt) ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಐಎಎಸ್‌‍ ಅಧಿಕಾರಿಯಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಕುಮಾರ್‌ ನಾಯಕ್‌ ಸಾಕಷ್ಟು ಹೆಸರು ಮಾಡಿದ್ದರು.

ನಿವೃತ್ತಿಯ ಬೆನ್ನಲ್ಲೇ ಅಚ್ಚರಿ ಎಂಬಂತೆ ಕಾಂಗ್ರೆಸ್‌‍ನಿಂದ (congress) ಬಿ ಫಾರಂ (B form) ಪಡೆದುಕೊಂಡಿದ್ದರು. ರಾಯಚೂರು ಲೋಕಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ (BJP) ಅಭ್ಯರ್ಥಿ ರಾಜ ಅಮರೇಶ್ವರ ನಾಯಕ್ ಅವರ ವಿರುದ್ಧ ಕುಮಾರ್‌ ನಾಯಕ್‌ ಶೇ.52ರಷ್ಟು ಮತ ಪಡೆದು ಆಯ್ಕೆಯಾಗಿದ್ದಾರೆ. ಮತೆಣಿಕೆ ಪ್ರತೀ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದರು.

 

ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ್ ‌ನಾಯಕ ‌6,33,949 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ  5,52,474 ಮತಗಳನ್ನು ಪಡೆದಿದ್ದಾರೆ. 81,475 ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾದಿಸಿದ್ದಾರೆ. ಇನ್ನು ಮತ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ನೂತನ ಸಂಸದರನ್ನ ಬುಜದ ಮೇಲೆ ಎತ್ತಿ ಘೋಷಣೆ ಕೂಗಿ ಸಂಭ್ರಮಿಸಿದರು.

WhatsApp Group Join Now
Telegram Group Join Now
Share This Article