K2kannadanews.in
Viral video ರಾಜಸ್ಥಾನ : ರೀಲ್ಸ್ (Reels) ಮಾಡುವ ಬರದಲ್ಲಿ ತಮ್ಮ ಜೀವವನ್ನೇ (Life) ಕಳೆದುಕೊಳ್ಳುವ ಅದೆಷ್ಟು ಘಟನೆಗಳು ಪದೇಪದೇ ಮರುಕಳಿಸುತ್ತಿವೆ. ಸೋಶಿಯಲ್ (Social media) ಮೀಡಿಯಾದಲ್ಲಿ ಫೇಮಸ್ (Famus) ಆಗಲು ರೀಲ್ಸ್ ಮಾಡಲು ಹೋಗಿ ರಾಜಸ್ಥಾನದ (Rajasthan) ಭಿಲ್ವಾರಾದ ಜಲಪಾತದಲ್ಲಿ (Falls) ಯುವಕನೊಬ್ಬ 150 ಅಡಿ ಎತ್ತರದಿಂದ (Feet height) ಬಿದ್ದು ಸಾವನ್ನಪ್ಪಿದ್ದಾನೆ.
ದೇಶಾದ್ಯಂತ ಭಾರೀ ಮಳೆಯಾಗಿದ್ದ (Heavy rain) ಹಿನ್ನೆಲೆಯಲ್ಲಿ ನೀರಿನ ರಭಸ ಹೆಚ್ಚಾಗಿ ಅನೇಕ ಜಲಪಾತಗಳು ಉಕ್ಕಿ ಹರಿಯುತ್ತಿದೆ. ಈ ನಡುವೆ ಜಲಪಾತದಲ್ಲಿ ಯುವಕನೋರ್ವ (Yoith) ಕೊಚ್ಚಿ ಹೋದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ. ಈ ವೈರಲ್ ವಿಡಿಯೊದಲ್ಲಿ ನದಿಯ ಬಲವಾದ ಪ್ರವಾಹಗಳ ನಡುವೆ ಯುವಕರು ಹಗ್ಗವನ್ನು ಗಟ್ಟಿಯಾಗಿ ಹಿಡಿದು ಅದರ ತುದಿಯಲ್ಲಿ ಹರಿಯುವ ಪ್ರವಾಹದಲ್ಲಿ (Flood) ಸಿಲುಕಿದ್ದ ತಮ್ಮ ಸ್ನೇಹಿತನನ್ನು (friend) ಎಳೆಯುತ್ತಿದ್ದಾರೆ. ಆದರೂ, ಆತ ನೀರಿನ ರಭಸಕ್ಕೆ (Force) ಹಿಡಿತ ಕಳೆದುಕೊಂಡು ಅವನ ಸ್ನೇಹಿತರ ಕಣ್ಮುಂದೆಯೇ ಬಲವಾದ ಪ್ರವಾಹಗಳ ಜೊತೆಗೆ ಕೊಚ್ಚಿಹೋಗಿದ್ದಾನೆ. ಈ ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ರೀಲ್ ಮಾಡಲು ಹೋಗಿ ಸಾವಿಗೀಡಾಗುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದು ಒಂದೇ ಘಟನೆಯಲ್ಲ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ , ಶೇರ್ ಮತ್ತು ಫಾಲೋವರ್ಸ್‍ಗಳನ್ನು ಪಡೆಯಲು ಜನರು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ಇದಕ್ಕೂ ಮುಂಚೆಯೇ, ಸೋಶಿಯಲ್ ಮೀಡಿಯಾದಲ್ಲಿ ರೀಲ್ ಮಾಡಲು ಹೋಗಿ ಅನೇಕರು ಸಾವನ್ನಪ್ಪಿದ್ದಾರೆ. ಇಂಥಾ ದು ಸಾಹಸಕ್ಕೆ ಕೈ ಹಾಕಬೇಡಿ ಎನ್ನುವುದು K2 ನ್ಯೂಸ್ ನ ಕಳಕಳಿ.