K2kannadanews.in
Crime News ರಾಯಚೂರು : ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಸಾವಿರಾರು ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿ ಮುಂಭಾಗದಲ್ಲಿ ಹಣ ಹೂಡಿಕೆ ಮಾಡಿದ ವ್ಯಕ್ತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ದರ್ವೇಶಿ ಗ್ರೂಪ್ ಆಫ್ ಕಂಪನಿಯು ಕಳೆದ ಎರಡು ಮೂರು ವರ್ಷಗಳಿಂದ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು, ಟ್ರೇಡಿಂಗ್ ಮಾಡಿ, 10 ರಿಂದ 14% ಬಡ್ಡಿ ನೀಡುತ್ತಾ ಬಂದಿತ್ತು. ಬಡ ಮತ್ತು ಮಧ್ಯಮ ವರ್ಗದವರು ಹಣ ಗಳಿಸುವ ನಿಟ್ಟಿನಲ್ಲಿ ಈ ಒಂದು ಟ್ರೇಡಿಂಗ್ ಕಂಪನಿಯಲ್ಲಿ ಸಾವಿರಾರು ಜನ ಕೊಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಕಳೆದ ಒಂದು ತಿಂಗಳ ಹಿಂದಿನಿಂದ ದರ್ವೇಶಿ ಗ್ರೂಪ್ ಕಂಪನಿ ಮುಚ್ಚಲಿದೆ ಎಂಬ ಸುದ್ದಿ ಹರಡಿದೆ. ಇದರಿಂದ ಆತಂಕಗೊಂಡ ಹೂಡಿಕೆ ಮಾಡಿದ ಜನ ಕಂಪನಿ ಕಚೇರಿ ಮುಂಭಾಗದಲ್ಲಿ ಬಂದು ತಮ್ಮ ಹಣ ತಮಗೆ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದರು.
ಇದೇ ವಿಚಾರದಲ್ಲಿ ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದ ವೆಂಕಟೇಶ (35). ಆದರೆ ಇದುವರೆಗೂ ಕಂಪೆನಿಯಿಂದ ಯಾವುದೇ ಸಕಾರಾತ್ಮಕ ಉತ್ತರ ಇಲ್ಲದೆ ಮತ್ತು ಹಣ ನೀಡದೆ ಇದ್ದಿದ್ದರಿಂದ ಮನನೊಂದು ಇಂದು ಕಚೇರಿ ಮುಂಭಾಗದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿ ಇದ್ದ ಜನ ಆತನನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಚೇರಿಗೆ ನುಗ್ಗಿ ಕಚೇರಿಯಲಿನ ಸಾಮಗ್ರಿಗಳನ್ನು ಜನ ಒಡೆದು ಹಾಕಿದ್ದಾರೆ ಗಲಾಟೆಯಾಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತೆಂಮದತ್ತಾ.