ಮಸ್ಕಿ : ಮೊಹರಂ ಆಚರಣೆ ವೇಳೆ ಕೆಂಡ ಆಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದ ವ್ಯಕ್ತಿ‌ ಸಾವು..

K 2 Kannada News
ಮಸ್ಕಿ : ಮೊಹರಂ ಆಚರಣೆ ವೇಳೆ ಕೆಂಡ ಆಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದ ವ್ಯಕ್ತಿ‌ ಸಾವು..
WhatsApp Group Join Now
Telegram Group Join Now

K2kannadanews.in

Muharram celebrations ಮಸ್ಕಿ : ಮೊಹರಂ (Moharam) ಆಚರಣೆ ವೇಳೆ ಕೆಂಡ (Fire) ಆಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದು ವ್ಯಕ್ತಿ‌ ಮೃತಪಟ್ಟ ಘಟನೆ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಯಮನಪ್ಪ ನಾಯಕ್ (yamunappa nayak 45) ಕೊಂಡಕ್ಕೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮುಸ್ಲಿಂರ (Muslim) ಪವಿತ್ರ ಹಬ್ಬ ಮೊಹರಂ, ಮೊಹರಂ ಆಚರಣೆ ವೇಳೆ ದೇವರು (God) ಹೊತ್ತವರು ಅಗ್ನಿ ಹಾಯೋದು ಸಂಪ್ರದಾಯ. ದೇವರಲ್ಲಿ ಬೇಡಿಕೆ ಈಡೇರಿದಾಗಲೂ ಕೆಲವರು ಬೆಂಕಿ ಹಾಯುತ್ತಾರೆ. ಹೀಗೆ ಬೆಂಕಿ ಹಾಯುವಾಗ ಕೊಂಡಕ್ಕೆ ಆಯ ತಪ್ಪಿ ಬಿದ್ದ ಯಮನಪ್ಪ ನಾಯಕ್ ಬಿದ್ದಿದ್ದಾನೆ.

ಬೆಂಕಿಯ ಕೆನ್ನಾಲಿಗೆಗೆ ಭಾಗಶಃ ಸುಟ್ಟು ಕರಕಲಾಗಿದೆ ಯಮುನಪ್ಪನ ದೇಹ. ಈ ವೇಳೆ ಗ್ರಾಮಸ್ಥರು ಬೆಂಕಿ ಆರಿಸಲು ನೀರು (Water) ಹಾಕಿ ಯಮುನಪ್ಪನ ರಕ್ಷಣೆಗೆ ಮುಂದಾಗಿದ್ದರು ಸಾಧ್ಯವಾಗಲಿಲ್ಲ. ಬೊಮ್ಮನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ (Late night) ಘಟನೆ ನಡೆದಿದ್ದು, ವ್ಯಕ್ತಿ ಕೊಂಡಕ್ಕೆ ಬಿದ್ದು ಬೆಂಕಿಯಲ್ಲಿ ಬೇಯುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಘಟನೆ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ (Thurvihala police station) ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article