ಛೇ ಇವಳೆಂಥಾ ಹೆತ್ತ ತಾಯಿ : ತಾಯಿ ಮಕ್ಕಳ ಸಂಬಂಧಕ್ಕೆ ಕಳಂಕ..!

K 2 Kannada News
ಛೇ ಇವಳೆಂಥಾ ಹೆತ್ತ ತಾಯಿ : ತಾಯಿ ಮಕ್ಕಳ ಸಂಬಂಧಕ್ಕೆ ಕಳಂಕ..!
WhatsApp Group Join Now
Telegram Group Join Now

K2kannadanews.in

Viral Video News : ಪ್ರಪಂಚದಲ್ಲಿಯೇ ಶ್ರೇಷ್ಠವಾದ ಸಂಬಂಧ ಅಂದರೆ ಅದು ತಾಯಿ ಮಗುವಿನ ಸಂಬಂಧ. ಮಕ್ಕಳ ಏಳಿಗೆ ಬಯಸುವ ತಾಯಿ ನಿಸ್ವಾರ್ಥ ಪ್ರೀತಿ, ಮಮತೆ ಹೊಂದಿರುತ್ತಾಳೆ. ಆದ್ರೆ ಇಲ್ಲೊಬ್ಬ ತಾಯಿ ಇದಕ್ಕೆ ತದ್ವಿರುದ್ಧವಾಗಿ ವರ್ತಿಸಿದ್ದು, ಗಂಡನ ಮೇಲಿನ ಕೋಪಕ್ಕೆ, ಹೆತ್ತ ಕಂದಮ್ಮನಿಗೆ ಮನಬಂದಂತೆ ಥಳಿಸಿ ಪೈಶಾಚಿಕತೆ ಮೆರೆದಿದ್ದಾಳೆ. ತಾಯಿಯ ಕೆಟ್ಟ ವರ್ತನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://x.com/ManojSh28986262/status/1813561038228582910?t=9vdwkNK4Ojf5_6Bnwdqo1g&s=19

ಮನೋಜ್‌ ಶರ್ಮಾ (Manojsh28986262) ಎಂಬುವರ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಜಗತ್ತಿನಲ್ಲಿ ಇಂತಹ ತಾಯಂದಿರೂ ಇದ್ದಾರೆಯೇ? ತನ್ನ ಪುಟ್ಟ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಈಕೆಯನ್ನು ತಕ್ಷಣ ಬಂಧಿಸಿ ಎಂದು ಬರದುಕೊಂಡಿದ್ದಾರೆ. ಈ ಒಂದು ಘಟನೆ ಹರಿದ್ವಾರದ ಜಬ್ರೆದಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಾಯಿ ತನ್ನ ಪುಟ್ಟ ಮಗನನ್ನು ಅಮಾನುಷವಾಗಿ ಥಳಿಸಿದ್ದಾಳೆ. ಈ ಅಮಾನವೀಯ ಕೃತ್ಯದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಹರಿದ್ವಾರ ಪೊಲೀಸರು, ಇದು ಎರಡು ತಿಂಗಳ ಹಿಂದೆ ನಡೆದ ಘಟನೆಯಾಗಿದೆ. ಪತಿಯನ್ನು ಹೆದರಿಸಲು ಇಂತಹ ಕೃತ್ಯ ಮಾಡಿದ್ದಾಳೆ. ಪತಿರಾಯ ಮನೆಗೆ ಬಾರದೆ, ಖರ್ಚಿಗೆ ಹಣವನ್ನೂ ನೀಡದೆ ಗೊಳಾಡಿಸುತ್ತಿದ್ದ ಎನ್ನಲಾಗಿದೆ. ಹಾಗಾಗಿ ಮಹಿಳೆ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ಇದೀಗ ಈಕೆಗೆ ಮೊದಲ ಹಂತದ ಕೌನ್ಸೆಲಿಂಗ್‌ ಕೂಡಾ ನಡೆಸಲಾಗಿದೆʼ ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಮಗನ ಮೇಲೆ ತಾಯಿ ಕುಳಿತು ಮಗುವಿನ ತಲೆಯನ್ನು ನೆಲಕ್ಕೆ ಜಜ್ಜಿ, ಹಲ್ಲೆ ನಡೆಸಿ ವಿಪರೀತವಾಗಿ ಹಿಂಸೆ ನೀಡುತ್ತಿರುವ ಅಮಾನವೀಯ ದೃಶ್ಯವನ್ನು ಕಾಣಬಹುದು. ಜುಲೈ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ದಯವಿಟ್ಟು ಈ ಕ್ರೂರಿ ಮಹಿಳೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article