K2kannadanews.in
Delivery in Auto ಮಸ್ಕಿ : ಹೆರಿಗೆಗಾಗಿ ಆಸ್ಪತ್ರೆಗೆ (hospital for delivery) ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯ ಆಟೊದಲ್ಲಿಯೇ (Auto) ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ಮರವಾರ ಮಸ್ಕಿ (Maski) ಪಟ್ಟಣದಲ್ಲಿ ನಡೆದಿದೆ.
ರಾಯಚೂರು (raichur) ಜಿಲ್ಲೆಯ ಮಸ್ಕಿ ಪಟ್ಟಣದ ಸಂತೆ ಬಜಾರ ರಸ್ತೆಯಲ್ಲಿನ ಘಟನೆ ನಡೆದಿದೆ. ಸಂತೆ ಬಜಾರ ಮನೆಯೊಂದರ ತುಂಬು ಗರ್ಭಿಣಿಗೆ ಹೆರಿಗೆ ನೋವು (Pain) ಕಾಣಿಸಿಕೊಂಡಿದೆ. ಕುಟುಂಬಸ್ಥರು (Family) ತಕ್ಷಣ ಆಟೊ ಕರೆಸಿದ್ದಾರೆ. ಮಹಿಳೆಯನ್ನು ಆಟೊದಲ್ಲಿ ಕೂರಿಸಿ ಆಸ್ಪತ್ರೆಗೆ (Hospital) ಕರೆದೊಯಗಯುವಾಗ ನೋವು ಹೆಚ್ಚಾಗಿದೆ. ಹಾಗಾಗಿ ಚಾಲಕ (Driver) ತಕ್ಷಣ ಮಾರ್ಗ ಮಧ್ಯದಲ್ಲಿಯೇ ಆಟೊ ನಿಲ್ಲಿಸಿದ್ದಾನೆ.
ನೆರೆಹೊರೆ ಮಹಿಳೆಯರು ಸಹಾಯಕ್ಕೆ (Help) ದಾವಿಸಿದ್ದು, ಆಟೊ ಸುತ್ತ ಪರದೆ ಕಟ್ಟಿ ಹೆರಿಗೆಗೆ ಸಹಕಾರ ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ಆಶಾ ಕಾರ್ಯಕರ್ತೆಯರು ಆಟೋ ಬಳಿ ಆಗಮಿಸಿ ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ (Government hospital) ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.