K2kannadanews.in
Viral News ರಾಯಚೂರು : ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಲಾಗಿದೆ ಎಂಬ ಕಾರಣಕ್ಕೆ ಲಾರಿ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಫೈನ್ ಕಟ್ಟುವಂತೆ ಪೊಲೀಸ್ ಇಲಾಖೆ ಮಾಲಿಕನಿಗೆ ಮೆಸೆಜ್ ಕಳಿಸಿರುವ ಒಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ರಾಯಚೂರು ಮೂಲದ ಭತ್ತ ಕಟಾವು ಮಷಿನ್ ಹೊತ್ತೊಯ್ಯುತ್ತಿದ್ದ ಲಾರಿ ಮಾಲಿಕನಿಗೆ ಈ ಸಂದೇಶ ಬಂದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಪೊಲೀಸ್ ಇಲಾಖೆ ಎಡವಟ್ಟು ಮಾಡಿಕೊಂಡಿದೆಯಾ ಅಥವಾ ಎಡಿಟೆಡ್ ಮೆಸೆಜ್ ವೈರಲ್ ಮಾಡಲಾಗಿದೆಯಾ ಎಂಬುದು ತಿಳಿಯಬೇಕಿದೆ, ಶರಣಗೌಡ ಪಿ ಮಾಲಿಪಾಟೀಲ್ ಎಂಬ ಲಾರಿ ಮಾಲಿಕನಿಗೆ ಮೆಸೆಜ್ ಬಂದಿದ್ದು, U/S 133 IMV ಅಗೆನೆಸ್ಟ್ ಆ್ಯಕ್ಟ್ ನಲ್ಲಿ ದಂಡ ವಿದಿಸಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ.
ವಾಹನ ಸಂಖ್ಯೆ : KA 64, 5999 ವಾಹನಕ್ಕೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಲಾಗಿದೆ ಎಂದು ನಮೋದು ಮಾಡಿ, ದಿನಾಂಕ 07.11.24 ರಂದು ಕಲ್ಪತರು ಹುಣುಸೂರು, ಕೋರ್ಟ ರೋಡಿನಲ್ಲಿ ಹೆಲ್ಮೆಟ್ ಧರಿಸಿಲ್ಲ ಹಾಗಾಗಿ 500 ದಂಡ ಕಟ್ಟಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಿ ಎಂದು ಸಂದೇಶ ರವಾನೆ ಮಾಡಲಾಗಿದೆ. ಅಸಲಿಗೆ ದಂಡ ವಿಧಿಸಿದ್ದು ದ್ವಿಚಕ್ರ ವಾಹನಕ್ಕೆ ಅಲ್ಲ ಅದು ಲಾರಿ ಎಂಬುದು ಗಮನಾರ್ಹ.