K2kannadanews.in
Crime news ಲಿಂಗಸೂಗೂರು : ಅಕ್ಕ, ಮಾವನನ್ನು ಸಂಬಂಧಿಕರೊಂದಿಗೆ ಬೆಂಗಳೂರಿಗೆ ಕಳುಹಿಸಲು ಬಸ್ ನಿಲ್ಲಿಸಲಿಲ್ಲ ಎಂಬ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲುತೂರಾಟ ನಡೆಸಿದ ಘಟನೆ ಸಂಭದ ಓರ್ವ ವ್ಯಕ್ತಿಯನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುರುಗುಂಟಾ ವ್ಯಾಪ್ತಿಯ ಗೋಲಪಲ್ಲಿ ಬಳಿ ಮಂಗಳವಾರ ಕೆಎಸ್ಸಾರ್ಟಿಸಿ ಬಸ್ ಹಾಗೂ ಇತರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಗೋಲಪಲ್ಲಿ ಗ್ರಾಮದ ತಿಮ್ಮಣ್ಣ ಪಾಟೀಲ್ ಎಂದು ಗುರುತಿಸಲಾಗಿದೆ. ತನ್ನ ಅಕ್ಕ, ಮಾವನನ್ನು ಸಂಬಂಧಿಕರೊಂದಿಗೆ ಬೆಂಗಳೂರಿಗೆ ಕಳುಹಿಸಲು ಗುರುಗುಂಟಾ ಗ್ರಾಮಕ್ಕೆ ಬಂದಿದ್ದೆ. ಬಸ್ಸುಗಳು ನಿಲ್ಲಿಸದೆ ಇರುವುದಕ್ಕೆ ಅಸಮಾಧಾನಗೊಂಡು ವಾಪಸ್ಸು ಮನೆಗೆ ಕರೆದುಕೊಂಡು ಹೋಗಬೇಕಾಯಿತು. ನಂತರ 4 ಮಂದಿ ಗೆಳೆಯರೊಂದಿಗೆ ಗೋಲಪಲ್ಲಿಯ ಗುಡ್ಡದಲ್ಲಿ ಪಾರ್ಟಿಮಾಡಿ ಕುಡಿದ ಅಮಲಿನಲ್ಲಿ ಮಂಗಳವಾರ ತಡರಾತ್ರಿ 1.30 ರ ಸಮಯಕ್ಕೆ ಮೂರು ಕೆಕೆಆರ್ ಟಿಸಿ, ಬಸ್ಸು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲೆಸೆದು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾನೆ.
ಗೋಲಪಲ್ಲಿ ಬಳಿ ಕಲ್ಲು ತೂರಾಟದಲ್ಲಿ ಸಾರಿಗೆ ಸಂಸ್ಧೆಯ 3 ಬಸ್ಸಿನ ಕಿಟಕಿ ಹಾಗೂ ಗಾಜುಗಳು ಹೊಡೆದು ಹೋಗಿದ್ದವು, 79 ಸಾವಿರ ರೂಪಾಯಿ ಮೌಲ್ಯದ ಕಿಟಕಿ ಬಸ್ಸಿನ ಮುಂಭಾದ ಗಾಜುಗಳು ಹೊಡೆದು ಹಾನಿಯಾದ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ದಮತೋರು ದೊಡ್ಡಿಯ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇನ್ನುಳಿದ 4 ಜನ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ ಎಂದು ಹಟ್ಟಿ ಠಾಣೆಯ ಪಿಐ ಹೋಸಕೆರಪ್ಪ ಮಾಹಿತಿ ನೀಡಿದ್ದಾರೆ.