K2kannadanews.in
Accident News ಸಿರವಾರ : ಮಾನ್ವಿ (Manvi) ಕಡೆಯಿಂದ ಮರಳು (Sand) ಸಾಗಿಸುತ್ತಿದ್ದ ಲಾರಿಯಂದು(lorry) ಚಾಲಕನ (Driver) ನಿಯಂತ್ರಣ ತಪ್ಪಿ ರಸ್ತೆ (Road) ಮಧ್ಯದಲ್ಲಿ ಮುಗುಚಿ ಬಿದ್ದ ಘಟನೆ ಗೊಲ್ಲದಿನ್ನಿ ಗ್ರಾಮದ ಬಳಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಗೊಲ್ಲದಿನ್ನಿ ಗ್ರಾಮದ ಬಳಿಯಮಾರೆಮ್ಮ ದೇವಿ ದಿಬ್ಬಿ ಹತ್ತಿರ ಮುಗುಚಿ ಬಿದ್ದಿದೆ. ಮಾನವೀಯ ಚಿಕಲ ಪರ್ವಿಯಿಂದ ಗೋಲದಿನ್ನಿ ಮೂಲಕ, ಹೊರಟಿದ್ದ ವೇಳೆ ಘಟನೆ ಜರುಗಿದೆ. ಬಸವನಬಾಗೇವಾಡಿ ಮೂಲದ ಲಾರಿ ಎಂದು ಹೇಳಲಾಗುತ್ತಿದ್ದು ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಳಗಿನ ಜಾವ 9:30 ಸುಮಾರಿಗೆ ಈ ಒಂದು ಘಟನೆ ಜರುಗಿದ್ದು ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಸೇರಬರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಗೆ ಆಡ್ಡವಾಗಿ ಬಿದ್ದಿರುವ ಲಾರಿ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.