
ಸಿಂಧನೂರು : ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ, ಸಿಂಧನೂರು ನಗರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿದೆ. ಇದು ರಾಜ್ಯ ಹೆದ್ದಾರಿಯೋ ಅಥವಾ ಕೆರೆಯೊ ಎಂಬ ಗೊಂದಲಕ್ಕೆ ವಾಹನ ಸವಾರರು ಸಿಲುಕಿದ್ದಾರೆ.
ಬೆಳ್ಳಂ ಬೆಳಗ್ಗೆ 2 ಗಂಟೆಗಳ ಕಾಲ ಸುರಿದ ಮಳೆಗೆ, ಸಿಂಧನೂರು ಕುಷ್ಟಗಿ ಮುಖ್ಯ ರಸ್ತೆ ಸಂಪೂರ್ಣ ಕೆರೆಯಂತೆ ಆಗಿದೆ. ಸರಾಗವಾಗಿ ನೀರು ಹಾರಿದು ಹೋಗಿಲು, ಚರಂಡಿ ಮಾಡದ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ನೀರು ನಿಂತು ಕೆರೆಯಂತಾಗಿದೆ. ಇದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ಬೀದಿ ಬದಿಯ ಅಂಗಡಿ ವ್ಯಾಪಾರಸ್ಥರು ಕೂಡ ಸಂಕಷ್ಟಕ್ಕೆ ಸಲುಕಿದ್ದಾರೆ. ಇನ್ನು ನೀರು ಹರಿಯದ ಹಿನ್ನೆಲೆಯಲ್ಲಿ, ಮೊಣಕಾಲು ಎತ್ತರಕ್ಕೆ ನೀರು ನಿಂತು ರಸ್ತೆ ಪಕ್ಕದಲ್ಲಿ ಇರುವಂತಹ ಅಂಗಡಿಗಳಿಗೆ ನುಗ್ಗಿದೆ. ಕಿರಾಣಿ ಅಂಗಡಿ, ತರಕಾರಿ, ಹಣ್ಣಿನ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರಸ್ಥರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆದ್ದಾರಿ ನಿರ್ಮಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿ ಹಿಡಿ ಶಾಪ ಹಾಕುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]