K2kannadanews.in
Crocodile ರಾಯಚೂರು : ಕೆರೆಗೆ (Lake) ನೀರು (Water) ಕುಡಿಯಲು ಹೋದ ಕುರಿ (Got), ಹಂದಿ (Pig), ದನಕರುಗಳನ್ನು ಬೃಹತ್ ಮೊಸಳೆ ತಿಂದು ಹಾಕುತ್ತಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು (Villager’s), ಎಲ್ಲರೂ ಒಗ್ಗೂಡಿ ಮೊಸಳಿಯೊಂದನ್ನು ಹಿಡಿದು ಕೃಷ್ಣಾ ನದಿಗೆ (Krishna river) ಸಾಗಿಸಿದ ಘಟನೆ ನಡೆದಿದೆ.
ರಾಯಚೂರು (Raichur) ತಾಲೂಕಿನ ಡಿ.ರಾಂಪುರ (D.rampur) ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು. ಕೃಷ್ಣಾ ನದಿಯಿಂದ ಬಂದು ಡಿ.ರಾಂಪುರ ಕೆರೆ ಸೇರಿಕೊಂಡಿದ್ದ ಭಾರೀ ಗಾತ್ರದ ಮೊಸಳೆ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ನಿಮಗೆ ಅರಣ್ಯ ಇಲಾಖೆ (Forest deportment) ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು ಯಾವುದೇ ಕ್ರಮ (Action) ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರೆಲ್ಲ ಒಗ್ಗೂಡಿ ಇಂದು ಬಲೆ ಹಾಕಿ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಮೊಸಳೆಯನ್ನು ಕೃಷ್ಣ ನದಿಯಲ್ಲಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯು ಗುರುವಾರ ನಡೆದಿದ್ದು, ಮೊಸಳೆ ಹೆಸರೇ ಹೇಳಿದರು ಗ್ರಾಮಸ್ಥರಲ್ಲಿ ಇನ್ನೂ ಭಯ ದೂರವಾಗಿಲ್ಲ. ಕಾರಣ ಕೆರೆಯಲ್ಲಿ ಇನ್ನೂ ಎರಡು ಮೊಸಳೆಗಳಿರುವ ಅನುಮಾನಗಳಿದ್ದು, ಅರಣ್ಯ ಇಲಾಖೆ ಸಿಬಂದಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.