ಕರ್ತವ್ಯನಿರತ ಗಾರ್ಡ್ ಅಕ್ಕಮಹಾದೇವಿ ಕಾಲೇಜಿನ 2ನೇ ಮಹಡಿಯಿಂದ ಬಿದ್ದು ಸಾವು..

K 2 Kannada News
ಕರ್ತವ್ಯನಿರತ ಗಾರ್ಡ್ ಅಕ್ಕಮಹಾದೇವಿ ಕಾಲೇಜಿನ 2ನೇ ಮಹಡಿಯಿಂದ ಬಿದ್ದು ಸಾವು..
WhatsApp Group Join Now
Telegram Group Join Now

K2kannadanews.in

Crime News ಸಿಂಧನೂರು : ಕರ್ತವ್ಯನಿರತ ಗಾರ್ಡ್ (Gard) ಅಕ್ಕಮಹಾದೇವಿ ಕಾಲೇಜಿನ (Akkamahadevi college) 2ನೇ ಮಹಡಿಯಿಂದ ಬಿದ್ದು ಸಾವಿಗೀಡಾದ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿನ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ (Night) ಕೆಲಸಕ್ಕೆ ಹೋಗಿದ್ದ, ಮಧ್ಯರಾತ್ರಿ ಬಹಿರ್ದೆಸೆಗೆಂದು ಎದ್ದು ಕೆಳಗೆ ಇಳಿಯುತ್ತಿದ್ದ ವೇಳೆ ಮೇಲ್ಚಾವಣಿಗೆ ತಡೆಗೋಡೆ ಇಲ್ಲದಿರುವುದರಿಂದ ಕೆಳಗಡೆ ಬಿದ್ದು ಮೃತಪಟ್ಟಿದ್ದಾನೆ. ಬಸಯ್ಯ ಧುಮತಿ(45) ಮೃತಪಟ್ಟ ಸೆಕ್ಯುರಿಟಿ. ಇನ್ನು ಘಟನಾ ಸ್ಥಳಕ್ಕೆ ಸಿಂಧನೂರು ನಗರ ಪೊಲೀಸರು ಭೇಟಿ ನಡೆಸಿ ಪರಿಶೀಲನೆ ಮಾಡಿ, ಶವಪರೀಕ್ಷೆಗೆ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article