K2kannadanews.in
Crime News ರಾಯಚೂರು : ನಗರದ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳನ್ನು ಕದಿಯುವ ಕಳ್ಳರ ತಂಡವೊಂದು ನವಜಾತ ಶಿಶುವನ್ನು ಕದಿಯಲು ಹೋಗಿ ಜನರ ಕೈಗೆ ತಗಲಕ್ಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾಯಚೂರು ನಗರದಲ್ಲಿ ಇರುವ ರಿಮ್ಸ್ ಆಸ್ಪತ್ರೆ ಸದಾ ಒಂದಲ್ಲ ಒಂದು ಘಟನೆಯಿಂದ ಸುದ್ದಿಯಲ್ಲಿರುತ್ತದೆ. ಸಿರೆ ಉಟ್ಟು ಮಕ್ಕಳನ್ನು ಕದಿಯಲು ಸರಕಾರಿ ರಿಮ್ಸ್ ಬಂದ ಕಳ್ಳರ ತಂಡ ಬಂದ ಘಟನೆ ಜರುಗಿದ್ದು, ಆಸ್ಪತ್ರೆಯ ನಾಲ್ಕನೆ ಮಹಡಿಯಲ್ಲಿ ಬಾಣಂತಿಯರ ವಾರ್ಡ್ ಬಳಿ ಬಂದು ನವಜಾತ ಶಿಶುಗಳನ್ನು ಕದಿಯುವ ಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಧ್ಯರಾತ್ರಿ 2ಗಂಟೆ ವೇಳೆ ಬಾಣಂತಿ, ಹಿಂದೆ ಬಂದವರು ಗಾಢ ನಿದ್ರೆಗೆ ಜಾರಿರುವ ಸಮಯ ನೋಡಿಕೊಂಡು ಶಿಶುಗಳನ್ನು ಕದಿಯುವ ಯತ್ನ ಮಾಡಿದ ಎಂದು ಆರೋಪಿಸಲಾಗುತ್ತಿದೆ.
ಹಾಗೆ ಮಗುವನ್ನು ಕದಿಯಲು ಬಂದಿದ್ದ ಕಳ್ಳನನ್ನು ಅಲ್ಲನ ಜನ ಹಿಡಿದು ತರಾಟೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೇ ಇಲ್ಲ ಕರ್ತವ್ಯದಲ್ಲಿನ ಗೃಹ ರಕ್ಷಕ ದಳದ ಸಿಬ್ಬಂದಿಗಳು ಇರಲಿಲ್ಲ, ಎಲ್ಲೊ ಹೋಗಿ ಮಲಗಿದ್ದರು. ಈ ವೇಳೆ ಕಳಗಳನು ಮಹಿಳೆಯಂತೆ ಸೀರೆ ಉಟ್ಟು ಬಂದಿದ್ದ ಕಳ್ಳನನ್ನು ಹೊಡಿದು ಪೊಲೀಸರಿಗೆ ಒಪ್ಪಿಸಿದ್ಧಾರೆ. ಮೂರು ಜನರ ತಂಡ ಮಕ್ಕಳನ್ನ ಕದಿಯಲು ಬಂದಿದ್ದರು ಎಂಬ ಆರೋಪ ಮಾಡಲಾಗುತ್ತಿದೆ. ರಿಮ್ಸ್ ಆಡಳಿತ ಮಂಡಳಿ ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದು, ನಗರದ ಮಾರ್ಕೆಟಿಯಾರ್ಡ್ ಪೊಲೀಸ್ ಠಾಣೆಗೆ ಕಳ್ಳನನ್ನು ಒಪ್ಪಿಸಿದ್ದಾರೆ ಜನ. ಇನ್ನಾದರೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕಿದೆ.