K2kannadanews.in
Viral video ವೈರಲ್ ನ್ಯೂಸ್ : ಸಾಮಾಜಿಕ ಜಾಲತಾಣಗಳು (social media), ತಂತ್ರಜ್ಞಾನ (Technology) ಹೆಚ್ಚಾದಂತೆ ಸಂಬಂಧಗಳಿಗೆ (relationship) ಬೆಲೆ ಇಲ್ಲದಂತಾಗಿದೆ. ಅಂತಹ ವಿಡಿಯೋಗಳು (Videos) ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಇದೀಗ ಒಂದು ವಿಡಿಯೋ ವೈರಲ್ (viral) ಆಗಿದ್ದು, ಈ ವಿಡಿಯೋದಲ್ಲಿ ತಂದೆಯನ್ನೇ ಮಗಳು ಮದುವೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಓರ್ವ ತಂದೆ, ತನ್ನ ಮಗಳನ್ನೇ ವಿವಾಹವಾಗಿದ್ದಾನೆ. ಈತನಿಗೆ 50 ವರ್ಷ ವಯಸ್ಸಾಗಿದ್ದು, ಮಗಳಿಗೆ 24 ವರ್ಷ ವಯಸ್ಸಾಗಿದೆ. ಈ ವೀಡಿಯೋದಲ್ಲಿ ಮಗಳು ಮಾತನಾಡಿದ್ದು, ನಾನು ಮತ್ತು ನನ್ನ ಅಪ್ಪ ಇಬ್ಬರೂ ಮದುವೆಯಾಗಿದ್ದೇವೆ. ಈಗ ಸಮಾಜ ನಮ್ಮನ್ನು ಬೆಂಬಲಿಸಲಿ ಬಿಡಲಿ ನಾವಂತೂ ಜೊತೆಯಾಗಿ ಸಂಸಾರ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದು ಗಮನಿಸಬಹುದು.
ಈ ಒಂದು ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ, ಹಲವು ರೀತಿಯ ಪ್ರತಿಕ್ರಿಯೆಗಳು ಬಂದಿದ್ದು, ಇವರಿಬ್ಬರು ಮಾಡಿರುವ ಕೆಲಸಕ್ಕೆ ಹಲವರು ಆಕ್ರೋಶ ವಕ್ತಪಡಿಸುತ್ತಿದ್ದರೇ, ಇನ್ನು ಕೆಲವರು ಇವರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು, ಈ ರೀತಿ ವೀಡಿಯೋ ಮಾಡಿ ಹಾಕುತ್ತಾರೆ. ಅಸಲಿಗೆ ಅಲ್ಲೇನೂ ನಡೆದೇ ಇರುವುದಿಲ್ಲ ಅಂತ ಕಮೆಂಟ ಮಾಡುತ್ತಿದ್ದಾರೆ.