ಟೋಲ್ ಗೇಟ್ ಧ್ವಂಸ; ಶಾಸಕರ ಪುತ್ರನ ವಿರುದ್ದ ದೂರು..

K 2 Kannada News
ಟೋಲ್ ಗೇಟ್ ಧ್ವಂಸ; ಶಾಸಕರ ಪುತ್ರನ ವಿರುದ್ದ ದೂರು..
Oplus_16908288
WhatsApp Group Join Now
Telegram Group Join Now

K2Kannadanews.in

Crime News ದೇವದುರ್ಗ : ದೇವದುರ್ಗದ ಕಾಕರಗಲ್ ಬಳಿಯ ರಾಜ್ಯ ಹೆದ್ದಾರಿಗೆ ನಿರ್ಮಿಸಿರುವ ಟೋಲ್ ಗೇಟ್ ಬಂದ್ ಮಾಡುವಂತೆ ಆಗ್ರಹಿಸಿ ಗಲಾಟೆ ಮಾಡಿದ‌ ಕೆಲವರು ಅಲ್ಲಿನ ವಸ್ತುಗಳನ್ನು ದ್ವಂಸಗೊಳಿಸಿರುವ ಘಟನೆ ನಡೆದಿದೆ.

ಬೈಕ್ ಮತ್ತು ಕಾರ್ ಗಳಲ್ಲಿ ಬಂದ ನೂರಾರು ಜನ ಟೋಲ್ ನಿರ್ಮಾಣ ಖಂಡಿಸಿ ಕೆಲವು ಕಾಲ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಶಾಸಕರಾದ ಕರೆಮ್ಮ ಜಿ. ನಾಯಕ ಸ್ಥಳಕ್ಕೆ ಭೇಟಿ ನೀಡಿದ್ದರು. ಶಾಸಕರನ್ನು ಕಂಡು ಪ್ರಚೋದಿತರಾದ ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮುರಿದು ಸಿಸಿ ಟಿವಿ ಕ್ಯಾಮರಾಗಳನ್ನು ಕಿತ್ತೆಸೆದು ಕಂಪ್ಯೂಟರ್ ಗಳನ್ನು ಹಾನಿಗೊಳಿಸಿದ್ದಾರೆ. ಕಿಟಕಿ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗಬ್ಬೂರು ಠಾಣೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಮೇಲ್ವಿಚಾರಣೆಯಲ್ಲಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನವೀನ್ ಕುಮಾರ್ ಅವರು ಗಬ್ಬೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಸಕಿಯ ಸಹೋದರ ತಿಮ್ಮರೆಡ್ಡಿ ನಾಯಕ, ಪುತ್ರ ಸಂತೋಷ ನಾಯಕ ಕಾರ್ಯಕರ್ತ ಸಲೀಂ ಕಾಕರಗಲ್ ಸೇರಿದಂತೆ 12ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article