ಕುರುಡಿ ಕ್ರಾಸ್ : ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಲಾರಿ ಡಿಕ್ಕಿ..

K 2 Kannada News
ಕುರುಡಿ ಕ್ರಾಸ್ : ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಲಾರಿ ಡಿಕ್ಕಿ..
WhatsApp Group Join Now
Telegram Group Join Now

K2kannadanews.in

Accident News ರಾಯಚೂರು : ಲಾರಿ (lorry) ಚಾಲಕನ ನಿಯಂತ್ರಣ ತಪ್ಪಿ, ಸಿಂಧನೂರು ರಾಯಚೂರು ಹೆದ್ದಾರಿಯಲ್ಲಿ (Sindhanur-raichur highway) ಲಾರಿ ಕಿರು ಸೇತುವೆಗೆ ಡಿಕ್ಕಿ (accident) ಹೊಡೆದು, ಅದೃಷ್ಟವಶಾತ್ ಲಾರಿ ಚಾಲಕ ಪರಾದ ಘಟನೆ ಕುರುಡಿ ಕ್ರಾಸ್ ಬಳಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲ್ಲೂಕಿನ ಕುರುಡಿ ಕ್ರಾಸ್ (cross) ಬಳಿ ಘಟನೆ ನಡೆದಿದ್ದು, ಸಿಂಧನೂರು ಕಡೆಯಿಂದ ರಾಯಚೂರು ಕಡೆ ಹೊರಟಿದ್ದ ಅದಿರು ತುಂಬಿದ ಲಾರಿ ಗುರುವಾರದಂದು ಅಪಘಾತಕ್ಕೊಳಗಾಗಿದೆ. ಲಾರಿ ಚಾಲಕನ (driver) ನಿಯಂತ್ರಣ ತಪ್ಪಿ (lost control) ಕಿರು ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರೂ ಕೂಡ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯ ಮುಂದಿನ ಭಾಗ ನುಜ್ಜು ಗುಜ್ಜಾಗಿ, ಟೈಯರ್ ಲಾರಿಯಿಂದ ಬೇರ್ಪಟ್ಟು,‌ ಲಾರಿಯಲ್ಲಿದ್ದ ಅದಿರು ರಸ್ತೆ ಮೇಲೆ ಚೆಲ್ಲಿದೆ. ಘಟನೆಯು ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

WhatsApp Group Join Now
Telegram Group Join Now
Share This Article