K2kannadanews.in
Local News ಮಾನ್ವಿ : ತಾಲೂಕಿನ ರಾಜಲಬಂಡ ಅಣೆಕಟ್ಟೆಯಲ್ಲಿ ದೈತ್ಯಾಕಾರದ ಮೀನುಗಳು ಬಲೆಗೆ ಬಿಳುತ್ತಿದ್ದು. ಇಂದು ಓರ್ವ ಮೀನುಗಾರನಿಗೆ 20 ಕೆಜಿ ತೂಕ ಇರುವ ದೈತ್ಯಕಾರದ ಕಾಟ್ಲ ಮೀನು ಬಲೆಗೆ ಬಿದ್ದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲಬಂಡಾ ಜಲಾಶಯದಲ್ಲಿ ಈ ಮೀನು ದೊರೆತಿದ್ದು, ಈ ಬಾರಿ ಉತ್ತಮ ಮಳೆಯದ ಹಿನ್ನಲೆ ತುಂಗಭದ್ರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿನ ಬಾರಿ ಗಾತ್ರದ ಮೀನುಗಳು ನದಿಯಲ್ಲಿ ಹರಿದು ಬಂದಿದ್ದು, ತಾಲೂಕಿನ ರಾಜಲಬಂಡ ಅಣೆಕಟ್ಟೆಯಲ್ಲಿ ದೈತ್ಯಾಕಾರದ ಮೀನುಗಳು ಬಲೆಗೆ ಬಿಳುತ್ತಿವೆ. ಮೀನುಗಾರರಿಗೆ 20 ಕೆಜಿ ತೂಕ ಇರುವ ದೈತ್ಯಕಾರದ ಕಾಟ್ಲ ಮೀನು ಇದುವರೆಗೂ ಸಿಕ್ಕ ಬಾರಿ ಮೀನುಗಳಲ್ಲಿ ಒಂದು. ರೌ, ಬಾಳೆ, ಜಿಲೇಬಿ ಮೀನುಗಳು ಕನಿಷ್ಟ 5ರಿಂದ 7 ಕೆಜಿ ಇದ್ದು ಮೀನು ಪ್ರಿಯರಿಗೆ ಪ್ರಮುಖ ಆಕರ್ಷಣೆಯಾಗಿವೆ.
ತುಂಗಭದ್ರ ನದಿಯಲ್ಲಿ ನಾವು ಮೀನು ಹಿಡಿಯುವುದಕ್ಕೆ ಗಾಳ ಹಾಕಿದಾಗ ಸಣ್ಣ ಗಾತ್ರದ ಹಾಗೂ 1 ಕೆಜಿ ಇರುವ ಮೀನುಗಳು ಮಾತ್ರ ದೊರೆಯುತ್ತಿದ್ದವು . ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ತುಂಗಭದ್ರ ನದಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದ್ದರಿಂದ ಈ ಸಮಯದಲ್ಲಿ ನಮಗೆ ಮೀನುಗಳು ಸಿಗುತ್ತಿರಲಿಲ್ಲ. ಅದರೆ ಈ ಬಾರಿ ಅಣೆಕಟೆಯ ಗೇಟ್ ಮುರಿದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಜಲಾಶಯದಿಂದ ಹರಿದು ಬಂದಿದ್ದು ಅದರೊಟ್ಟಿಗೆ ಬಾರಿ ಗಾತ್ರದ ಮೀನುಗಳು ಕೂಡ ಬಂದಿವೆ. ಅಣೆಕಟ್ಟಿನಲ್ಲಿ ಗಾಳ ಹಾಕಿದಾಗ ಬಾರಿ ಗಾತ್ರದ ಮೀನುಗಳು ಬೀಳುತ್ತಿವೆ ಎಂದು ಹವ್ಯಾಸಿ ಮೀನುಗಾರ ರಾಜ ಮಹಮ್ಮದ್ ಹೇಳುತ್ತಾರೆ.