K2kannadanews.in
Crime News ರಾಯಚೂರು : ಗಾಣಧಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ 14-15ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಪಿಡಿಓ ಅವರಿಗೆ ಕೇಳಿದ ಹಿನ್ನಲೆ ಪಿ.ಡಿ.ಓ ಅವರ ಪತಿ ನವೀನ್ ಎನ್ ಜೀವ ಬೆದರಿಕೆ ಹಾಕಿದ ಆಡಿಯೋ ವೈರಲ್ ಆಗಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ರಾಯಚೂರು ಎಸ್ಪಿಗೆ ದೂರು ನೀಡಲಾಗಿದೆ.
ರಾಯಚೂರು ತಾಲ್ಲೂಕಿನ ಗಾಣದಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಕೆ.ಪ್ರಾಣೇಶ ಕರೆ ಮಾಡುವ ಮೂಲಕ ಪ್ರಣಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. 24-11-2023 ರಂದು ಗಾಣದಾಳ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನರೇಗಾ, ಕರವಸೂಲಿ ಮತ್ತು 14 & 15ನೇ ಹಣಕಾಸು ಯೋಜನೆಯ ಯಾವುದೇ ದಾಖಲೆಗಳನ್ನು ಪ್ರಚಾರಪಡಿಸದೇ ಕೇವಲ ನರೇಗಾ ಕಡತವನ್ನು ಮಾತ್ರವೇ ಪ್ರಸ್ತುತ ಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಈ ಬಗ್ಗೆ ದಾಖಲೆಗಳನ್ನು ಕೇಳಿದರು ನೀಡುತ್ತಿಲ್ಲ ಎಂದು ಅವರ ಮೇಲೆ ಜಿಲ್ಲಾ ಪಂಚಾಯಿತಿಯಲ್ಲಿ ದೂರು ಸಲ್ಲಿಸಲಾಗಿದೆ.
ಇದರಿಂದ ಅಸಮಾಧಾನ ಕೊಂಡ ಪಿಡಿಓಪತಿ ನವೀನ್ ಎಂಬುವವರು ದೂರುದಾರ ಗ್ರಾಮ ಪಂಚಾಯಿತಿ ಸದಸ್ಯ ಕೆ ಪ್ರಾಣೇಶ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ನನ್ನ ಹೆಂಡತಿಗೆ ಏನಾದರೂ ಆದರೆ ಸುಮ್ಮನೆ ಬಿಡುವುದಿಲ್ಲ, ಜಾತಿ ಹೆಸರು ಹೇಳಿ ಬೆದರಿಕೆ ಹಾಕಿ, ಜಾತಿನಿಂದನೆ ಪ್ರಕರಣ ದಾಖಲಿಸುತ್ತೇ ಎಂದು ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದ್ದು ಇದರ ಅನ್ವಯ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.