K2kannadanews.in
Local News ರಾಯಚೂರು : ನಗರದಲ್ಲಿ(City) ಇರುವ ಜೆಸ್ಕಾಂ ಇಲಾಖೆಯಲ್ಲಿ ಟ್ರಾನ್ಸ್ಫಾರ್ಮರ್ (transformers)ಗಳ ಕೊರತೆ ಎದುರಾಗಿದೆಯಾ ಎಂಬ ಅನುಮಾನಗಳು ಕಾಡುತ್ತಿದೆ. ನಗರ ಪ್ರದೇಶದಲ್ಲಿ ಇದೆ ಪರಿಸ್ಥಿತಿಯಾದರೆ ಗ್ರಾಮಾಂತರ (Rural) ಭಾಗದ ಜನರ ಪಾಡೇನು.
ರಾಯಚೂರು ನಗರದ ವಾರ್ಡ್ ನಂಬರ್ ಎರಡರಲ್ಲಿ ಕಳೆದ ಎರಡು ದಿನಗಳಿಂದ ( 2 days) ಟ್ರಾನ್ಸ್ಫಾರ್ಮರ್ ಸುಟ್ಟು ಹೋದರು ದುರಸ್ತಿ ಮಾಡಲು ಆಗುತ್ತಿಲ್ಲ. ಮೊನ್ನೆ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಟ್ರಾನ್ಸ್ಫಾರ್ಮರ್ ಸುಟ್ಟುಹೋಗಿದೆ. ಆದರೆ ಜೆಸ್ಕಾಂ (GESCOM) ಇಲಾಖೆ ಬಳಿ ಮತ್ತೊಂದು ಟ್ರಾನ್ಸ್ಫಾರ್ಮರ್ ಇಲ್ಲದೆ. ದುರಸ್ತಿ ಮಾಡಲು ಆಗದೆ ಪರದಾಡುತ್ತಿದೆ. ಬಡಾವಣೆಯ ಜನರು ಕಳೆದ ಎರಡು ದಿನಗಳಿಂದ ಜಸ್ಕಾಂ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನ ಆಗುತ್ತಿಲ್ಲ.
ದೂರು ನೀಡುತ್ತಿದ್ದಂತೆ ತಾತ್ಕಾಲಿಕವಾಗಿ ಲೈನ್ ಮ್ಯಾನ್ ಗಳನ್ನು ಕಳುಹಿಸಿ ತಪಾಸಣೆ ಮಾಡುವ ಪ್ರಕ್ರಿಯೆ ಮಾಡುತ್ತಿದ್ದಾರೆ ಹೊರತು ಬಡಾವಣೆ ನಿವಾಸಿಗಳ ಸಮಸ್ಯೆ ಬಗೆಹರಿಸಿ ವಿದ್ಯುತ್ ನೀಡುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಬಳ್ಳಾರಿಯಿಂದ ಹೊಸ ಟ್ರಾನ್ಸ್ಫರ್ ತರಿಸಲಾಗಿದೆ ಎಂದು ಹೇಳುತ್ತಾರೆ. ಆದರೆ ಆ ಒಂದು ಟ್ರಾನ್ಸ್ಫರ್ ಮಾತ್ರ ಯಾವುದು ಕೆಲಸಕ್ಕೆ ಬಾರದ ಪರಿಸ್ಥಿತಿಯಲ್ಲಿದ್ದು ಹಳೆಯ ಟ್ರಾನ್ಸ್ಫಾರ್ಮರ್ ಗೆ ಬಣ್ಣ ಬಳಿದು ಕಳಿಸಿದಂತೆ ಇದೆ. ಇನ್ನಾದರೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ತೋರಿದ ಗತಿಯಲ್ಲಿ ಸಮಸ್ಯೆ ಬಗೆಹರಿಸಬೇಕಿದೆ.