K2kannadanews.in
Local News ರಾಯಚೂರು : ಭೌಗೋಳಿಕವಾಗಿ ಶ್ರೀಮಂತ ನಾಡು ಅಂದ್ರೆ ಅಂದು ರಾಯಚೂರು. ಬೆಳಕು ಎಂಬ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಂಡು, ಕಲಾವಿದರಿಗೆ ಗೌರವ ತರುವ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ ಹೇಳಿದರು.
ಇಂದು ನಗರದ ರಂಗಮಂದಿರದಲ್ಲಿ ಬೆಳಕು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಬೆಳಕು ಸಮ್ಮೇಳನದಲ್ಲಿ ಭಾಗಿಯಾಗಿದ್ದ ಅವರು, ಬೆಳಕು ಎಂದರೆ ಜ್ಞಾನ, ಪ್ರೀತಿ, ದಯೆ, ಪ್ರಗತಿ, ಸಾಮರಸ್ಯ ಹಾಗೂ ಸಹಬಾಳ್ವೆಯಾಗಿದ್ದು, ಬೆಳಕು ಇದ್ದಲ್ಲಿ ದ್ವೇಷ ಹಾಗೂ ಸಂಘರ್ಷಗಳು ಇರುವುದಿಲ್ಲ. ಕಲೆಗೆ ಪ್ರೋತ್ಸಾಹಿಸುವ ಮತ್ತು ಕಲಾವಿದರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಬೆಳಕು ಸಂಸ್ಥೆ ಮಾಡುತ್ತಿದೆ ಎಂದರು.