K2kannadanews.in
Local News ರಾಯಚೂರು : ನೀರಿನ ಪೈಪ್ ಲೈನ್ ಮತ್ತು ರಸ್ತೆ ಕಾಮಗಾರಿ ಗುತ್ತಿಗೆದಾರಣ ನಿರ್ಲಕ್ಷ್ಯ ಮತ್ತು ಮಂದಗತಿಯ ಕೆಲಸದಿಂದ ನೆಲಹಾಳ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು ತಾಲೂಕಿನ ನೆಲಹಾಳ ಗ್ರಾಮದಲ್ಲಿ ರಸ್ತೆಯೊಂದು ಕೆಸರು ಗದ್ದೆಯಾಗಿ ನಿರ್ಮಾಣವಾಗಿದೆ. ನೀರಿನ ಪೈಪ್ ಲೈನ್ ಮತ್ತು ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದ್ದು, ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆ ಕೆಸರುಗದ್ದೆಯಾಗಿ ನಿರ್ಮಾಣವಾಗಿದೆ. ಇದೇ ರಸ್ತೆಯಲ್ಲಿ ವಾಹನಗಳು ಸಿಲುಕಿಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರ ಮಂದಗತಿಗೆ ಕಾಮಗಾರಿಯೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.