K2kannadanews.in
Local News ರಾಯಚೂರು : ಆಹಾರ ಅರಸಿ ನರಿಯೊಂದು ಶ್ರೀರಾಮ್ ನಗರ ಬಡಾವಣೆಗೆನುಗ್ಗಿದ್ದು ಅಲ್ಲಿ ನಾಲ್ಕು ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ರಾಯಚೂರು ನಗರದ ಶ್ರೀರಾಮನಗರ ಕಾಲೋನಿಯಲ್ಲಿ ನರಿ ದಾಳಿ ನಡೆದಿದ್ದು, ಆಹಾರ ಅರಸಿ ನಗರ ಪ್ರದೇಶಕ್ಕೆ ಬಂದಿದೆ ಎನ್ನಲಾಗುತ್ತಿದೆ. ಅಲ್ಲದೇ ನರಿಗೆ ಹುಚ್ಚು ಹಿಡಿದಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಘಟನೆಯಿಂದ ನಗರವಾಸಿಗಳಲ್ಲಿ ಆತಂಕ ಹೆಚ್ಚಿತ್ತು. ಇಬ್ಬರು ವಯೋವೃದ್ದರು, ಓರ್ವ ಬಾಲಕಿ, ಓರ್ವ ಯುವಕನಿಗೆ ನರಿ ಕಚ್ಚಿದೆ. ಅಕ್ಕನಾಗಮ್ಮ, ಪೂಜಾ, ರಂಗಣ್ಣ, ಮಂಜುನಾಥ ನರಿ ದಾಳಿಗೆ ಒಳಗಾದವರು ಎಂದು ಗುರುತಿಸಿಲಾಗಿದೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮುಂದುವರೆದ ಚಿಕಿತ್ಸೆ. ನರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಿಯರ ಸಹಾಯದಿಂದ ಸೆರೆ ಹಿಡಿದಿದ್ದಾರೆ.