K2kannadanews.in
Local news ರಾಯಚೂರು : ಮಾನ್ವಿ ಪಟ್ಟಣದಲ್ಲಿ 15 ಅಡಿ ಉದ್ದದ ಹೆಬ್ಬಾವು ಒಂದು ಪ್ರತ್ಯಕ್ಷವಾಗಿ ನಿವಾಸಿಗಳಲ್ಲಿ ಆತಂಕ ಮೂಡಿಸಿದ ಘಟನೆ ಎಂದು ಜರುಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಕೋನಾಪುರ ಪೇಟೆ ಬಡಾವಣೆಯ ಕಿನ್ನರಿ ಎಂಬುವವರ ಮನೆ ಬಳಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಕೊನಾಪುರ ಪೇಟೆ ಬಳಿ ಬೆಟ್ಟ ಇರುವ ಹಿನ್ನೆಲೆಯಲ್ಲಿ, ಆಹಾರವನ್ನು ಅರಸಿ ಜನವಸತಿ ಪ್ರದೇಶಕ್ಕೆ ಈ ಒಂದು ಹೆಬ್ಬಾವು ಬಂದಿದೆ ಎಂದು ಹೇಳಲಾಗುತ್ತಿದೆ. ಹೆಬ್ಬಾವು ಪ್ರತ್ಯಕ್ಷವಾಗಿದ್ದನ್ನ ಕಂಡು ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದು ಕೂಡಲೇ ಉಗರ ತಜ್ಞರಿಗೆ ಕರೆ ಮಾಡಿ ಹಾವನ್ನ ಸೆರೆಹಿಡಿದಿದ್ದಾರೆ. ಹಾಗೂ ಚಲಿಸುವ ವಿಡಿಯೋ ಒಂದು ವೈರಲ್ ಆಗಿದ್ದು ಸುಮಾರು 15 ಅಡಿ ಉದ್ದದ ಹೆಬ್ಬಾವು ಇದಾಗಿದೆ. ಹೆಬ್ಬಾವು ಹಿಡಿದ ನಂತರ ಚೀಲಕ್ಕೆ ತುಂಬಿ ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ಸುರಕ್ಷಿತವಾಗಿ ಮತ್ತೆ ಕಾಡಿಗೆ ಮರಳಿ ಬಿಟ್ಟಿದ್ದಾರೆ.