K2kannadanews.in
Local News ರಾಯಚೂರು : ಒಂದು ಕಡೆ ಸಚಿವರು ಶಾಸಕರು ಜಿಲ್ಲೆಯ ಅಭಿವೃದ್ಧಿಗಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ ಇನ್ನೊಂದು ಕಡೆ ಈ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಆ ಸಭೆಗಿಂತ ಮುಖ್ಯ ಅನ್ನಿಸಿತ್ತೇನೋ ರಮ್ಮಿ ಆಟ.
ಹೌದು ರಾಯಚೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ತ್ರೈಮಾಸಿಕ ಕೆ ಡಿ ಪಿ ಸಭೆ ನಡೆಯುತ್ತಿತ್ತು. ಸಭೆ ಆರಂಭವಾದಾಗಿನಿಂದಲೂ ಕೂಡ ಶಾಸಕರುಗಳು ಸಚಿವರೊಂದಿಗೆ ಅನುದಾನ ಅಭಿವೃದ್ಧಿಗಾಗಿ ಮತ್ತು ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿ ಜಗಳವಾಡುತ್ತಿದ್ದರು.
ಮತ್ತೊಂದು ಕಡೆ ರಮ್ಮಿ ಆಟದಲ್ಲಿ ಬ್ಯುಸಿಯಾದ ಜಿಲ್ಲಾ ಮಟ್ಟದ ಅಧಿಕಾರಿ. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ್, ರಮ್ಮಿ ಆಡುತ್ತಿದ್ದರು. ಅತ್ತಿತ್ತ ಕದ್ದುಮುಚ್ಚಿ ನೋಡುತ್ತಾ ರಮ್ಮಿ ಆಡ್ತಿದ್ದ ವೀಡಿಯೋ ಮಾಧ್ಯಮ ಕ್ಯಾಮೆರಾದಲ್ಲಿ ಸೆರೆಯಾಯ್ತು. ವಿಡಿಯೋ ಸರಿಯಾಗಿದ್ದು ಗೊತ್ತಾಗುತ್ತದೆ ಸಭೆಯಿಂದ ಎದ್ದು ಹೊರ ನಡೆದಿದ್ದಾರೆ.