K2kannadanews.in
Local News ರಾಯಚೂರು : ಎರಡು ವರ್ಷದಿಂದ ನೀವು ಅಭಿವೃದ್ಧಿ ಕೆಲಸ ಮಾಡಿಲ್ಲ, ಸಭೆಯಲ್ಲಿ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ನಡೆ ಖಂಡಿಸಿ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸ್ವಪಕ್ಷದ ಶಸಕರೇ ಕಿಡಿಕಾರಿದ ಘಟನೆ ಜರುಗಿದೆ.
ರಾಯಚೂರು ನಗರದ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಘಟನೆ ಜರುಗಿದೆ. ಜಿಲ್ಲೆಗೆ ಇಬ್ಬರು ಸಚಿವರಿದ್ದರೂ ಅಭಿವೃದ್ಧಿ ಕೆಲಸ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ವಿರುದ್ಧ ಗರಂ ಆಗಿ ಸ್ವಪಕ್ಷೀಯ ಶಾಸಕನಿಂದ ಕಿಡಿಕಾರಿದ್ದಾರೆ. ಏರು ಧ್ವನಿಯಲ್ಲಿ ಸಚಿವರನ್ನು ತರಾಟೆಗೆ ಶಾಸಕ ತೆಗೆದುಕೊಂಡಿದ್ದಾರೆ.
ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರು ಶರಣಪ್ರಕಾಶ್ ಪಾಟೀಲ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಅಭಿವೃದ್ಧಿ ಕೆಲಸ ಮಾಡಲು ಬರಲ್ಲ ಎಂದು ಕೆಡಿಪಿ ಸಭೆಯ ಮಾಹಿತಿ ನೀಡಿಲ್ಲ ಎಂದು ಶಾಸಕ ಗರಂ.