ಶಾಲೆಯಲ್ಲಿ ಕೊಠಡಿ ಇಲ್ಲ ಮರದ ನೆರಳೆ ಕೊಠಡಿ..

K 2 Kannada News
ಶಾಲೆಯಲ್ಲಿ ಕೊಠಡಿ ಇಲ್ಲ ಮರದ ನೆರಳೆ ಕೊಠಡಿ..
WhatsApp Group Join Now
Telegram Group Join Now

K2kannadanews.in

Local News ರಾಯಚೂರು : ತಾಲೂಕಿನ ಭಾಯಿದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಬದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮರದ ನೆರಳಲ್ಲೆ ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಒಂದು ಪರಿಸ್ಥಿತಿ ನೋಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲಿದೆ ಎಂಬ ಪ್ರಶ್ನೆಗಳು ಉದ್ಭವವಾಗುತ್ತವೆ.

ಹೌದು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ 1ನೇ ತರಗತಿ ಯಿಂದ 7ನೇ ತರಗತಿಯವರೆಗೂ ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಾರೆ. 210 ವಿದ್ಯಾರ್ಥಿಗಳಿದ್ದು ಅಷ್ಟು ವಿದ್ಯಾರ್ಥಿಗಳಿಗೂ 5 ಕೊಠಡಿಗಳಿದ್ದು ಅದರಲ್ಲೇ ವಿದ್ಯಾರ್ಥಿಗಳು ಪಾಠ ಕೇಳಬೇಕು. ಕೆಲವು ತರಗತಿಗಳು ಕೊಠಡಿ ಒಳಗೆ ಪಾಠ ಮಾಡಿದರೆ ಇನ್ನುಳಿದ ಮಕ್ಕಳಿಗೆ ಮರದ ನೆರಳೆ ಪಾಠದ ಕೊಠಡಿಯಾಗಿದೆ. ಶಾಲೆಯ ಆವರಣದಲ್ಲಿ ಮಕ್ಕಳು ಪಾಠ ಕೇಳುವುದರಿಂದ ಗಾಳಿ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ಹಲವವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನೆಯಾಗಿಲ್ಲ ಎನ್ನುತ್ತಾರೆ. ಇದೀಗ ಎಸ್ ಡಿ ಎಂ ಸಿ ಅಧ್ಯಕ್ಷ ವೀರೇಶ್ ಅವರು ಸಿಇಓ, ಡಿಡಿಪಿಐ, ಇಓ ಶಾಲೆಯ ಹೆಚ್ಚುವರಿ ಕೊಠಡಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದ ಸಿಇಓ, ಇಓ ಅವರಿಗೆ ಸಮಸ್ಯೆಬಗ್ಗೆ ಸೂಕ್ತ ಪರಿಹಾರ ಒದಗಿಸಿ ಎಂದು ಪತ್ರ ರವಾನಿಸಿದ್ದರು. ಆದ್ರೆ ಸಿಇಓ ಒರೆದ ಪತ್ರಕ್ಕೆ ಇಓ ಯಾವುದೆ ರೀತಿಯ ಪ್ರತಿಕ್ರಿಯೆ ನೀಡದೆ ಇರುವುದು ಇಓ ಅವರ ನಿರ್ಲಕ್ಷ್ಯಕ್ಕೆ ಕೈ ಗನ್ನಡಿ ಯಾಗಿದೆ ಎಂದು ಅಸಮಧಾನ ವ್ಯಕ್ತವಾಗುತ್ತಿದೆ.

WhatsApp Group Join Now
Telegram Group Join Now
Share This Article