K2kannadanews.in
Crime News ರಾಯಚೂರು : ಆ ಇಬ್ಬರಿಗೂ ಇನ್ನು ಮೀಸೆಗೆ ಚಿಗುರಿಲ್ಲ, ಜಗತ್ತು ಏನು ಅಂತ ಗೊತ್ತಿಲ್ಲ ಅಷ್ಟರಲ್ಲಾಗಲೇ ಕೈಯಲ್ಲಿ ಮಚ್ಚೆ ಹಿಡಿದಿದ್ದಾರೆ, ಅಣ್ಣನನ್ನು ತಳಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೊಂದಿಗೆ ಸೇರಿ ಓರ್ವ ಯುವಕನನ್ನು ಕೊಂದಿದ್ದಾರೆ.
ಹೌದು.. ರಾಯಚೂರು ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚು ತಲೆ ಇವೆ. ಕೇವಲ ಒಂದೇ ವಾರದ ಹಿಂದಷ್ಟೇ ನಡು ರಸ್ತೆಯಲ್ಲಿ ಓರ್ವ ಯುವಕರನ್ನು ಕೊಂದು ಹಾಕಲಾಗಿತ್ತು. ಈ ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಯುವಕನ ಕೊಲೆಯಾಗಿದೆ, ಅದು ಕೂಡ ಕ್ಷುಲ್ಲಕ ಕಾರಣಕ್ಕೆ. ಹಳೆ ದ್ವೇಷದ ಹಿನ್ನಲೆ ಮಾಣಿಕ್ ನಗರದ ನಿವಾಸಿಯೋರ್ವನನ್ನು ಚಾಕುವಿಂದ ಇರಿದು ಕೊಲೆ ಮಾಡಲಾಗಿದೆ. ಆರಿಫ್ (20) ಕೊಲೆಗೀಡಾದ ಯುವಕ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಮೃತ ಯುವಕ ಆರಿಫ್ ಸ್ನೇಹಿತರೊಂದಿಗೆ ಆರೋಪಿ ಮಹ್ಮದ್ ಗೌಸ್ ಅಣ್ಣನ ಮೇಲೆ ಹಲ್ಲೆ ಮಾಡಿ ಥಳಿಸಿದ್ದ, ಈ ಹಿನ್ನಲೆ ಅದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಮಹ್ಮದ್ ಗೌಸ್ ಹಾಗೂ ಆತನ ಸ್ನೇಹಿತ ಮುಜಾಯಿದ್ದೀನ್ ಸೇರಿ ಅರಿಫ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಇಬ್ಬರೂ ಆರೋಪಿಗಳಿಗೂ ಕೂಡ ಇನ್ನು ಸರಿಯಾಗಿ ಮೀಸೆಯೋ ಚಿಗುರಿಲ್ಲ. ಆಗಲೇ ಸೇಡು ದ್ವೇಷ ಅಂತ ಯುವಕನನ್ನ ಕೊಲೆ ಮಾಡಿ ಜೈಲು ಪಾಲಾಗಿದ್ದಾರೆ. ಅಸಲಿಯತ್ತಿಗೆ ಇಲ್ಲಿ ಮೃತ ಆರಿಫ ನದು ಹಲ್ಲೆಯಲ್ಲಿ ಯಾವುದೇ ಪಾತ್ರವಿರಲಿಲ್ಲ ಅಂತಾರೆ ಮನೆಯವರು.
ಇನ್ನು ಎರಡು ತಿಂಗಳ ಹಿಂದಷ್ಟೇ ಆರೋಪಿ ಅಣ್ಣನ ಮೇಲೆ ಒಂದು ಹಲ್ಲೆ ನಡೆದಿತ್ತು ಆ ದಿನ ಉದಯ್ ಎನ್ನುವ ಯುವಕ ಆರೋಪಿ ಮಹಮ್ಮದ್ ಗೌಸ್ ನ ಅಣ್ಣನ ಮೇಲೆ ಹಲ್ಲೇ ಮಾಡಿದ್ದ. ಆದರೆ ಅಂದು ನಡೆದ ಹಲ್ಲೆಯ ದಿನ ಮೃತ ಆರಿಫ್ ಮನೆಯಲ್ಲಿ ಇದ್ದನಂತೆ. ಕೇವಲ ಉದಯ್ನ ಸ್ನೇಹಿತ ಎಂದು ತಿಳಿದ ಆರೋಪಿಗಳು ಹಲ್ಲೆ ಮಾಡಿದ ದಿನ ಆರಿಫ್ ಕೂಡ ಇದ್ದ ಎಂದು ತಿಳಿದು ದ್ವೇಷ ಸಾಧಿಸಲು ಬಡಾವಣೆಯಲ್ಲಿ ಆರಿಫ್ ನನ್ನು ಅಟ್ಟಾಡಿಸಿಕೊಂಡು ಹೊಡೆದು, ಹೊಟ್ಟೆ ಬೆನ್ನಿಗೆ, ಚೂರಿಯಿಂದ ಚುಚ್ಚಿ, ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ ಎಂದು ಮನೆಯವರು ಆರೋಪಿಸಿ ದುಖಃದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರ ಆಗ್ರಹವಾಗಿದೆ.
ಅದೇನೆ ಇರಲಿ, ಮುಖದ ಮೇಲೆ ಮೀಸೆ ಬೆಳೆಯದೆ ಜಗತ್ತು ಏನು ಅಂತ ಅರ್ಥವಾಗದ ಯುವಕರ ಕೈಯಲ್ಲಿ ಮಾರಕಾಸ್ತ್ರಗಳು, ತಪ್ಪು-ಒಪ್ಪು ತಿಳಿಯದೆ ಅಮಾಯಕನ ಜೀವ ಬಲಿ ಪಡೆದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುತ್ತಾರೆ ಕಾದು ನೋಡಬೇಕಿದೆ.