K2kannadanews.in
Crime News ರಾಯಚೂರು : ಹಳೆ ದ್ವೇಷದ ಹಿನ್ನಲೆ ಚಾಕುವಿಂದ ಇರಿದು ಯುವಕನ ಕೊಲೆ ಮಾಡಿದ ಘಟನೆ ಮಾಣಿಕ್ ನಗರದಲ್ಲಿ ನಡೆದಿದೆ.
ಮಾಣಿಕ್ ನಗರ ಬಡಾವಣೆಯ ನಿವಾಸಿ ಆರಿಫ್ (20) ಕೊಲೆಗೀಡಾದ ಯುವಕ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಮೃತ ಯುವಕ ಆರಿಫ್ ಸ್ನೇಹಿತರೊಂದಿಗೆ ಆರೋಪಿ ಮಹ್ಮದ್ ಗೌಸ್ ಅಣ್ಣನ ಮೇಲೆ ಹಲ್ಲೆ ಮಾಡಿ ಥಳಿಸಿದ್ದ, ಈ ಹಿನ್ನಲೆ ಅದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಮಹ್ಮದ್ ಗೌಸ್ ಹಾಗೂ ಆತನ ಸ್ನೇಹಿತ ಮುಜಾಯಿದ್ದೀನ್ ಸೇರಿ ಅರಿಫ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನೇತಾಜಿ ನಗರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಸ್ಥಳಿಯರಿಂದ ಮಹಿತಿ ಪಡೆದು, ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.