K2kannadanews.in
Accident News ರಾಯಚೂರು : KKRTC ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಜರುಗಿ, ಬಸ್ಸಿನ ಕಬ್ಬಿಣದ ಸಲಾಖೆ ಒಂದು ಓರ್ವ ವ್ಯಕ್ತಿಯ ಕುತ್ತಿಗೆ ಸೀಳಿ 18 ಜನ ಗಂಭೀರವಾಗಿ ಗಾಯಗೊಂಡ ಘಟನೆ ಪಿಡಬ್ಲ್ಯೂಡಿ ಕ್ಯಾಂಪಳ್ಳಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ PWD ಕ್ಯಾಂಪ್ ಬಳಿ ಅಪಘಾತ ಜರುಗಿದ್ದು, ರಾಯಚೂರಿನಿಂದ ಸಿಂಧನೂರಿಗೆ ಬರುತ್ತಿದ್ದ ನಾನ್ ಸ್ಟಾಪ್ ಸಾರಿಗೆ ಬಸ್. ಸಿಂಧನೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಗಂಭೀರ ಹಾಗೂ 18 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ ಎಂದು ಹೇಳಲಾಗುತ್ತಿದೆ. ಗಾಯಾಳುಗಳು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಪಿಡಬ್ಲೂಡಿ ಕ್ಯಾಂಪ ಬಳಿಯ ಅಪಘಾತ ಸ್ಥಳದಲ್ಲಿ ಕೆಲಕಾಲ ಟ್ರಫಿಕ್ ಜಾಮ್ ಉಂಟಾಗಿತ್ತು. ಅಪಘಾತದಲ್ಲಿ ಒರ್ವ ಪ್ರಯಾಣಿಕನ ಕುತ್ತಿಗೆಯನ್ನು ಕಬ್ಬಣದ ಸಲಾಖೆ ಸೀಳಿಕೊಂಡು ಹೋಗಿದೆ. ಕುತ್ತಿಗೆಯಲ್ಲಿ ಕಬ್ಬಿಣದ ಸಲಾಖೆ ಇಟ್ಟುಕೊಂಡೆ ಆಸ್ಪತ್ರೆಗೆ ಬಂದ ಪ್ರಯಾಣಿಕ ಬಂದಿದ್ದಾನೆ. ಈ ವೇಳೆ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ಸಲಾಖೆ ಆಚೆ ತೆಗೆದಿದ್ದಾರೆ, ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಗಾಯಾಳುಗಳಿಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯು ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.