K2kannadanews.in
Crime News ರಾಯಚೂರು : ನಗರದ ಕೋಟೆ (Fort) ಪ್ರದೇಶದಲ್ಲಿನ ಬೆಟ್ಟದಗೇರಿಯ ಪುರಾತನ ಕೋದಂಡರಾಮ ದೇವಾಲಯದ (Temple) ಕಟ್ಟೆಯನ್ನ ದ್ವಂಸ ಮಾಡಲಾಗಿದ್ದು, ದೇವಾಲಯದ ಅರ್ಚಕರೇ ನಿಧಿ ಆಸೆಗೆ ಧ್ವಂಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಮಧ್ಯರಾತ್ರಿ ವೇಳೆ ಘಟನೆ ನಡೆದಿದ್ದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಲಾಟೆ ಮಾಡಿದ್ದಾರೆ. ಭಕ್ತರಿಗೂ ತಿಳಿಸದೇ, ಉಳಿದ ಅರ್ಚಕರಿಗೂ ಮಾಹಿತಿ ನೀಡದೇ ರಾತ್ರೋರಾತ್ರಿ ದೇವರ ಕಟ್ಟೆ ಧ್ವಂಸ ಮಾಡಿರುವುದು ನಿಧಿ ಆಸೆಗೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ನಿಧಿ ಆಸೆಗೆ ಇಲ್ಲಿನ ದೇವಾಲಯದ ಮೂರ್ತಿಗಳನ್ನ ಭಗ್ನಗೊಳಿಸಲಾಗಿತ್ತು. ಈಗ ದೇವಾಲಯ ಕಟ್ಟೆಯನ್ನ ಧ್ವಂಸಗೊಳಿಸಿದ್ದಾರೆ ಅಂತ ನಿವಾಸಿಗಳು ಆರೋಪಿಸಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅರ್ಚಕರನ್ನ ಕರೆದು ವಿಚಾರಣೆ ನಡೆಸಿದ್ದಾರೆ.