K2kannadanews.in
Crime News ವೈರಲ್ ನ್ಯೂಸ್ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ಫೋನ್ನಲ್ಲಿ ಮಾತನಾಡುವಾಗಿ ಉಪನ್ಯಾಸಕಿ ಆಕೆಯ ಫೋನ್ ಕಿತ್ತುಕೊಂಡಿದ್ದಾಳೆ. ಆಗ ಕೋಪಗೊಂಡ ವಿದ್ಯಾರ್ಥಿನಿ ಶಿಕ್ಷಕಿಗೆ ಚಪ್ಪಿಲಿಯಲ್ಲಿ ಹೊಡೆದ ವೀಡಿಯೋ ವೈರಲ್ ಆಗಿದೆ.
ಈ ಒಂದು ವೀಡಿಯೋದಲ್ಲಿ ನೋಡಿದಾಗ ಶಿಕ್ಷಕಿ ಮತ್ತು ವಿದ್ಯಾರ್ಥಿನಿ ಮಧ್ಯ ವಾಗ್ವಾದ ನಡೆದಿದೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಉಪನ್ಯಾಸಕಿ ಪೋನ್ ಕಿತ್ತುಕೊಂಡಿದ್ದಾರೆ. ಆಗ ವಿದ್ಯಾರ್ಥಿನಿ ಫೋನ್ ನೀಡುವಂತೆ ಒತ್ತಾಯಿಸಿದ್ದಾಳೆ. ಈ ದೃಶ್ಯ ಇತರ ವಿದ್ಯಾರ್ಥಿಗಳ ಫೋನ್ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿ ತನ್ನ ಫೋನ್ 12,000 ರೂಪಾಯಿ ಮೌಲ್ಯದ್ದಾಗಿದೆ ಕೊಟ್ಟುಬಿಡಿ ಎಂದು ಉಪನ್ಯಾಸಕಿಯೊಂದಿಗೆ ಜಗಳ ಆಡಿದ್ದಾಳೆ. ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದಾಗ ವಿದ್ಯಾರ್ಥಿನಿ ಬಾಯಿಗೆ ಬಂದಂತೆ ನಿಂದಿಸಿದ್ದಾಳೆ.
ಆ ಒಂದು ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಕೋಪಗೊಂಡ ವಿದ್ಯಾರ್ಥಿನಿ ಕಾಲಲ್ಲಿ ಇದ್ದ ಚಪ್ಪಲಿ ಕಳಚಿ ಉಪನ್ಯಾಸಕಿಗೆ ಹೊಡೆದಿದ್ದಾಳೆ. ಈ ದೃಶ್ಯವು ಅಲ್ಲಿದ್ದ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬೆಚ್ಚಿಬೀಳಿಸಿದೆ. ಶಿಕ್ಷಕಿ ಕೂಡ ಆಕೆಯ ಮೇಲೆ ಕೈ ಮಾಡಲು ಮುಂದಾದರು. ಆಗ ಜಗಳ ವಿಕೋಪಕ್ಕೆ ಹೋದಾಗ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಅವರ ಜಗಳವನ್ನು ಬಿಡಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾರೆ.