K2kannadanews.in
Crime News ದೇವದುರ್ಗ : ಬೆಳಗಿನಜಾವ 2.30 ಸುಮಾರಿಗೆ ಬುಲೆರೊ ಪಿಕಪ್ ವಾಹನ ಒಂದು ರಸ್ತೆ ಬದಿಯ ಹಳ್ಳದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಮರಾಪುರ ಕ್ರಾಸ್ ಬಳಿ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರ ಪೊಲೀಸ್ ಠಾಣೆ ವ್ಯಾಪ್ತಿಯ ಅಮರಪುರ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬುಲೆರೋ ಮ್ಯಾಕ್ಸ್ ಪಿಕಪ್ ಗಾಡಿಯಲ್ಲಿ ಆಂಧ್ರ ಪ್ರದೇಶದ ಹಿಂದೂಪುರ ಕಡೆಯಿಂದ ಯಾದಗಿರಿ ಜಿಲ್ಲೆಯ ಶಹಾಪುರ ದಲ್ಲಿ ನಡೆಯುವ ಸಂತೆಗೆ ಕುರಿ ಕೊಂಡುಕೊಳ್ಳಲು ಹೋಗುತ್ತಿದ್ದಾಗ ಅಮರಾಪುರ ಕ್ರಾಸ್ ಹತ್ತಿರ ಹಳ್ಳದ ಬ್ರಿಡ್ಜ್ ಗೆ ಪಿಕಪ್ ಗಾಡಿ ಗುದ್ದಿ ಅಪಘಾತವಾಗಿದೆ.
ತೆಲಂಗಾಣದ ಹಿಂದೂಪೂರಿನಿಂದ ಯಾದಗಿರಿಯ ಶಹಪುರ್ ನಲ್ಲಿ ನಡೆಯುವ ಕುರಿ ಸಂತೆಗೆ ಕುರಿಗಳನ್ನು ಖರೀದಿ ಮಾಡಲು ಹೋಗುತ್ತಿದ್ದರು . ಈ ವೇಳೆ ಜರುಗಿದ ಅಪಘಾತದಲ್ಲಿ ನಾಗರಾಜ್, ಸೋಮ, ನಾಗಭೂಷಣ, ಮುರಳಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನೂ ಚಾಲಕ ಆನಂದ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಾಲಕ ಆನಂದ 12 ಗಂಟೆ ಸುಮಾರಿ ವಾಹನ ಚಾಲನೆ ಮಾಡಲು ಇನ್ನೊಬ್ಬರಿಗೆ ಕೊಟ್ಟಿದ್ದಾನೆ. ಮೃತರಲ್ಲಿ ಯಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿಲ್ಲ. ಅಪಘಾತವು ಬೆಳಗಿನ ಜಾವ 2 ರಿಂದ 2:30 ರ ಅವಧಿಯಲ್ಲಿ ಜರಿಗಿದೆ. ಗಾಯಾಳು ಆನಂದ್ ಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.