K2kannadanews.in
Crime News ರಾಯಚೂರು : ಎರಡನೇ ಮದುವೆಯಾದ ಪತೆಯ ಮೇಲೆ ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದೇ ಕಾರಣವಾಗಿಟ್ಟುಕೊಂಡು ಪತ್ನಿ ಹಾಗೂ ಪತ್ನಿಯ ತಂಗಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಾಮಿಡಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ಶನಿವಾರ ಸಂಜೆ ಪತ್ನಿ ಹಾಗೂ ಪತ್ನಿಯ ತಂಗಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಏಗನೂರು ಗ್ರಾಮದ ತಿಮ್ಮಪ್ಪ ಹನುಮಂತ ಯಾದವ ತನ್ನ ಪತ್ನಿ ಪದ್ಮಾವತಿ (30) ಹಾಗೂ ಪತ್ನಿಯ ತಂಗಿ ಬೂದೆಮ್ಮ (23) ಅವರ ಮೇಲೆ ಗ್ರಾಮದ ನಡು ರಸ್ತೆಯಲ್ಲೇ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಪದ್ಮಾವತಿ ಹಾಗೂ ರಾಜಮ್ಮ ಇಬ್ಬರನ್ನೂ ರಿಮ್ಸ್‌ಗೆ ದಾಖಲಿಸಲಾಗಿದ್ದು, ಪದ್ಮವಾತಿ ಜೀವನಮರಣದ ಮಧ್ಯೆ ಹೋರಾಟ ನಡೆಸಿದ್ದಾರೆ.
ಕೂಲಿ ಕೆಲಸ ಮಾಡುವ ತಿಮ್ಮಪ್ಪ ಮದ್ಯ ಸೇವನೆ ಹಾಗೂ ಜೂಜಾಟದ ಚಟಕ್ಕೆ ಬಿದ್ದಿದ್ದ. ಮೊದಲ ಪತ್ನಿಗೆ ನಾಲ್ಕು ಮಕ್ಕಳು ಇದ್ದರೂ ಇನ್ನೊಬ್ಬಳನ್ನು ಮದುವೆಯಾಗಿದ್ದ. ಹೀಗಾಗಿ ಪದ್ಮಾವತಿ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಳು. ಇದೇ ಸಿಟ್ಟಿನಿಂದ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಬೂದೆಮ್ಮಳ ನಿಶ್ಚಿತಾರ್ಥವಾಗಿದ್ದು, ಮದುವೆ ಆಮಂತ್ರಣ ನೀಡಲು ಅಕ್ಕ ಪದ್ಮಾವತಿಯ ಮನೆಗೆ ಬಂದಿದ್ದಳು. ಇದೇ ವೇಳೆ ತಿಮ್ಮಪ್ಪ ಯಾದವ ಮನೆಗೆ ಬಂದು ಪದ್ಮಾವತಿ ಜೊತೆ ಜಗಳ ತೆಗೆದಿದ್ದಾನೆ.
ನಂತರ ಮಾತಿಗೆ ಮಾತು ಬೆಳೆದು ತಿಮ್ಮಪ್ಪ ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಪದ್ಮಾವತಿ ತಲೆ ಮೇಲೆ ಹೊಡೆದಿದ್ದಾನೆ. ಹಲ್ಲೆ ಮಾಡುವುದನ್ನು ತಡೆಯಲು ಬಂದ ರಾಜಮ್ಮ ಮೇಲೂ ಹಲ್ಲೆ ಮಾಡಿದ್ದಾನೆ. ಕಿರುಚಾಟ ಕೇಳಿ ಗ್ರಾಮಸ್ಥರು ಅವರ ನೆರವಿಗೆ ಬಂದಾಗ ಅವರಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಾಹಿತಿ ತಿಳಿದು ರಾಯಚೂರು ಗ್ರಾಮಾಂತರ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳಿಯರಿಂದ ಮಾಹಿತಿ ಪಡೆದಿದ್ದು ತನಿಖೆ ಆರಂಬಿಸಿದ್ದಾರೆ.