K2kannadanews.in
Viral News ವೈರಲ್ ಸುದ್ದಿ : ವಿಮಾನಗಳು (Plane) ಟೇಕಾಫ್ (Takeoff) ಮತ್ತು ಲ್ಯಾಂಡಿಂಗ್ (landing) ಸಂದರ್ಭದಲ್ಲಿ ಅವುಗಳ ಸಮೀಪದಲ್ಲಿ ನಿಲ್ಲಬಾರದು ಎಂದು ಹೇಳುತ್ತಿರುತ್ತಾರೆ. ಯಾಕೆ ಅಂತ ಪ್ರಶ್ನೆ ಮಾಡೊರು ಈ ವಿಡಿಯೋ ನೋಡಿದ್ರೆ ಅರ್ಥ ಆಗುತ್ತೆ.
ಈ ವಿಡಿಯೋವನ್ನು Massimo (@Rainmaker1973) ಹೆಸರಿನ ಎಕ್ಸ್ (X) ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ಈ ವಿಡಿಯೋಗೆ 16 ಮಿಲಿಯನ್‌ಗೂ ಅಧಿಕ ವ್ಯೂವ್, 59 ಸಾವಿರ ಲೈಕ್ಸ್, 7.8 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಈ ವಿಡಿಯೋ ಹಂಚಿಕೊಂಡಿರುವ ಪೋಸ್ಟ್‌ಗೆ ಇದೇ ರೀತಿಯ ವೈರಲ್ ಕ್ಲಿಪ್‌ಗಳನ್ನು ಕಮೆಂಟ್ ಮಾಡಲಾಗಿದೆ. MD80 ಸಿರೀಸ್ ಏರ್‌ಕ್ರಾಫ್ಟ್ ಟೇಕಾಫ್ ಸಂದರ್ಭದಲ್ಲಿ ಪ್ರವಾಸಿಗರು ಗಾಳಿಗೆ ಹೇಗೆ ಹಾರಿದ್ದಾರೆ ಅನ್ನೋದನ್ನು ಗಮನಿಸಿ ಎಂದು ಬರೆದುಕೊಳ್ಳಲಾಗಿದೆ. ಇನ್ನೂ ಈ ವಿಡಿಯೋ ಕೆರೆಬಿಯನ್ ದ್ವೀಪದ ಸೇಂಟ್ ಮಾರ್ಟಿನ್ ವಿಮಾನ ನಿಲ್ದಾಣದ್ದು ಎಂದು ಹೇಳಲಾಗುತ್ತಿದೆ.