K2kannadanews.in
Crime News ಬೀದರ್ : KKRTC ಬೀದರ್ ವಿವಾಗದ ಬಸ್ ಒಂದು ಕಪ್ಪಿಕೆರಿ ಗ್ರಾಮದ ಬಳಿ ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದ್ದು, ಪರಿಣಾಮ ಕೆಲಕಾಲ ಆತಂಕದ ವಾತವಾರಣ ನಿರ್ಮಾಣವಾಗಿತ್ತು.
ಬೀದರ್‌ನಿಂದ ಔರಾದ್ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನಡುರಸ್ತೆಯಲ್ಲಿಯೇ ಧಗ ಧಗನೆ ಹೊತ್ತಿ ಉರಿದಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಔರಾದ್ ಡಿಪೋಗೆ ಸೇರಿದ್ದ KKRTC ಬಸ್ ಔರಾದ್ ತಾಲೂಕಿನ ಕಪ್ಪಿಕೆರಿ ಎಂಬಲ್ಲಿ KA38 F 1033 ನಂಬರ್‌ನ ಬಸ್ ನಡುರಸ್ತೆಯಲ್ಲೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಸಾರಿಗೆ ಬಸ್ ಚಾಲಕ ಮಾರುತಿ ಎಂಬುವವರ ಸಮಯಪ್ರಜ್ಙೆಯಿಂದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 25 ಜನರ ಪ್ರಾಣ ಉಳಿದಿದೆ. ಯಾರೊಬ್ಬರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಎಂಜಿನನಲ್ಲಿ ಹೊಗೆ ಬರುತ್ತಲೇ ಡ್ರೈವರ್ ಬಸ್ ಸ್ಟಾಪ್ ಮಾಡಿ ಪ್ರಯಾಣಿಕರನ್ನ ಕೆಳಗಿಳಿಸಿ ಸಮಯಪ್ರಜ್ಙೆ ಮೆರೆದಿದ್ದಾನೆ.