K2kannadanews.in
Crime news ರಾಯಚೂರು : ಬಂಗಿಕುಂಟ ರಸ್ತೆಯಲ್ಲಿ (Road) ನೋಡ ನೋಡುತ್ತಿದ್ದಂತೆ ವ್ಯಕ್ತಿಯೊಬ್ಬನ (Murder) ಉಸಿರುಚೆಲ್ಲಿತ್ತು. ಬರೋಬ್ಬರಿ 34 ಬಾರಿ (Times) ವ್ಯಕ್ತಿಗೆ ಮನಸಿಗೆ ಬಂದಂತೆ ಇರಿದು ಹತ್ಯೆ ಮಾಡಲಾಗಿದೆ.
ರಾಯಚೂರು (Raichur) ನಗರದ ಬಂಗಿಕುಂಟ ಮುಖ್ಯರಸ್ತೆಯಲ್ಲಿ ಸಾರ್ವಜನಿಕ (Public place) ಸ್ಥಳದಲ್ಲಿ, ಮಾರ್ಚ್ 15ರ (March) ಮಧ್ಯಾಹ್ನ ಸಯ್ಯದ್ ಖದೀರ್ ಎಂಬ ವ್ಯಕ್ತಿಯನ್ನ ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ಇಡೀ ರಾಯಚೂರು ನಿವಾಸಿಗಳೆ ಬೆಚ್ಚಿಬಿದ್ದಾರೆ. ಬೈಕ್ (Bike) ಮೇಲೆ ಬಂದ ಅನ್ವರ ಮತ್ತು ತಿಮ್ಮಪ್ಪಎಂಬ ಆರೋಪಿಗಳು, ಸಯ್ಯದ್ ಖದೀರ್ನ ಮೇಲೆ ಹಲ್ಲೆ ಮಾಡಿ ಬರೋಬ್ಬರಿ 34 ಬಾರಿ ಇರಿದು ಹತ್ಯೆಗೈದು, ನೇರವಾಗಿ ಸದರಬಜಾರ್ ಠಾಣೆಗೆ ತೆರಳಿ ಶರಣಾಗಿದ್ದಾರೆ.