K2Kannadanews.in
Crime News ಗಬ್ಬೂರು : ಮೆಣಸಿನ (Chilly) ಕಾಯಿ ಮಾರಿದ ಹಣವನ್ನು ಬ್ಯಾಂಕಿನಿಂದ (Bank) ಬಿಡಿಸಿಕೊಂಡು ಹೋಗುತ್ತಿದ್ದ ವೇಳೆ, ಗಬ್ಬೂರು ಗ್ರಾಮದಲ್ಲಿ ಹಣ್ಣು (Fruit) ಖರೀದಿಸುತ್ತಿದ್ದ ವೇಳೆ ಗಾಡಿಯಲ್ಲಿ (Bike) ಇಟ್ಟಿದ್ದ 7 ಲಕ್ಷ ಹಣವನ್ನ ಖಧೀಮರು ಹೊತ್ತೋಯ್ದ ಘಟನೆ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಗೊಬ್ಬೂರು (Gabburu) ಗ್ರಾಮದಲ್ಲಿ ಘಟನೆ ಜರುಗಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಬೈಕ್ ನಲ್ಲಿ ಇಟ್ಟಿದ್ದ ಏಳು ಲಕ್ಷ ಎಗರಿಸಿದ್ದಾರೆ. ಬೈಕ್ ಮಾಲಿಕ ಶ್ರೀನಿವಾಸ ಹಣ್ಣು ಖರೀದಿಯಲ್ಲಿ ಮಗ್ನನಾಗಿದ್ದ, ಇದೇ ಸಮಯ ನೋಡಿಕೊಂಡು ಹಣ ಎಗರಿಸಿದ್ದಾರೆ. ಮೆಣಸಿನ ಕಾಯಿ ಮಾರಾಟ ಮಾಡಿದ್ದ ಹಣವನ್ನು ಬ್ಯಾಂಕ್ ನಲ್ಲಿ ಡ್ರಾ ಮಾಡಿಕೊಂಡಿದ್ದು ಗಮನಿಸಿದ ಖಧಿಮರು ಫಾಲೊ (Fallow) ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಸಮಯ (Time) ನೋಡಿ ಹಣ ಎಗರಿಸಿದ್ದಾರೆ.
ಖದಿಮದರ ಕೈಚಳಕ ಸಿಸಿ ಕ್ಯಾಮರಾದಲ್ಲಿ (CC camera) ಸೆರೆಯಾಗಿದ್ದು, ಮಟ ಮಟ ಮಧ್ಯನವೇ ಹಣ ಎಗರಿಸಿ ಬೈಕ್ ಮೇಲೆ ಪರಾರಿಯಾಗಿದ್ದಾರೆ (Escape). ವೀಡಿಯೋದಲ್ಲಿ ಕಾಣುವಂತೆ ಬಿಳಿ ಅಂಗಿ ತೊಟ್ಟು ಬಂದ ವ್ಯಕ್ತಿ ಬ್ಯಾಗ ಎಗರಿಸುತ್ತಾನೆ. ನೀಲಿ ಅಂಗಿ ತೊಟ್ಟು ಡಿಸ್ಕವರಿ ಬೈಕ್ ಮೇಲೆ ಬಂದ ಮತ್ತೋರ್ವ ಸೇರಿ ಇಬ್ಬರೂ ಪರರಿಯಾಗುತ್ತಾರೆ. ಹಣ್ಣು ಖರೀದಿ ನಂತರ ಬೈಕದ ಬಳಿ ಬಂದು ನೋಡಿದಾಗ ಹಣದ ಬ್ಯಾಗ್ ಕಾಣೆಯಾಗಿದ್ದು ಕಂಡು ಕೂಡಲೆ ಗಬ್ಬೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.